ಬಂಟ್ವಾಳ : ಗ್ರಾಮೀಣ ಭಾಗದ ತಳಮಟ್ಟದ ಜನರಿಗೂ ಎಲ್ಲಾ ಸವಲತ್ತುಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ತಲುಪಿಸುತ್ತಿದ್ದು,ಶ್ರೀ ಕ್ಷೇತ್ರ ಧರ್ಮಸ್ಥಳ ಬಡವರ ಪಾಲಿನ ಕಲ್ಪವೃಕ್ಷವಾಗಿದೆ ಎಂದು
ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪ್ರಭಾಕರ್ ಪ್ರಭು ಕರ್ಪೆ ಅವರು ಹೇಳಿದ್ದಾರೆ.

ಭಾನುವಾರ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು, ಅಲ್ಲಿಪಾದೆ, ನಾವೂರು ‘ಎ’ ಮತ್ತು ‘ಬಿ’ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಗ್ರಾಮದ ಅಭಿವೃದ್ಧಿಯಾಗುತ್ತಿದ್ದು, ತಮ್ಮ ಕಷ್ಟಗಳಿಗೆ ಸದಸ್ಯರು ಸಾಲಗಳನ್ನು ಪಡೆದು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ. ಯೋಜನಾಧಿಕಾರಿ ಜಯಾನಂದ ಪಿ. ಜನಜಾಗೃತಿ ಸದಸ್ಯರಾದ ಶ್ರೀನಿವಾಸ ಶೆಣೈ, ಸದಾನಂದ ನಾವೂರು, ಕೃಷ್ಣಪ್ಪ ಅಲ್ಲಿಪಾದೆ ಒಕ್ಕೂಟದ ಅಧ್ಯಕ್ಷರುಗಳಾದ ನವೀನ್. ಸಂತೋಷ್ ,ಗೀತಾ, ವಸಂತ ಮೂಲ್ಯ, ಸೇವಾ ಪ್ರತಿನಿಧಿಗಳಾದ ವಸಂತಿ,ವಿಜಯ, ಸುನಿತಾ ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ನಾಗರಾಜ್ ವಂದಿಸಿದರು. ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು
