ಬಂಟ್ವಾಳ; ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಇದರ ಆಶ್ರಯದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶುಕ್ರವಾರ ವಾಮದಪದವಿನ ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ ಆರಂಭಗೊಂಡಿರುವ 2076ನೇ ಮಧ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳ ಆರೋಗ್ಯ ತಪಾಸಣ ಕಾರ್ಯಕ್ರಮ ಶನಿವಾರ ನಡೆಸಲಾಯಿತು.

ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ, ಉಮೇಶ್ ಅಡ್ಯಂತಾಯ, ಇರ್ವತ್ತೂರಿನ ಖ್ಯಾತ ವೈದ್ಯರಾದ ಡಾ. ರಾಮಕೃಷ್ಣ ಭಟ್ ಅವರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದಲ್ಲದೆ ಯೋಗ ಕ್ಷೇಮವನ್ನು ವಿಚಾರಿಸಿದರು .
ಈ ಸಂದರ್ಭದಲ್ಲಿ ಶಿಬಿರದ ಯೋಜನಾಧಿ ಕಾರಿಗಳಾದ ಗಣೇಶ್ ,ತಾಲೂಕು ಯೋಜನಾಧಿಕಾರಿ
ಜಯಾನಂದ್ ಪಿ.,ಶಿಬಿರಾಧಿಕಾರಿ ರಮೇಶ್ ಆರೋಗ್ಯ ಸಹಾಯಕಿ ಜಯಲಕ್ಷ್ಮಿಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
