ಸುದ್ದಿ9 ಮೂಡುಬಿದರೆ: ಸ್ವರಾಜ್ಯ ಮೈದಾನ ನೂತನ ಸಿಂಥಟಿಕ್ ಟ್ರಾಕ್ನಲ್ಲಿ ನಡೆಯುತ್ತಿರುವ ಮಂಗಳೂರು ವಿ.ವಿ ಅಂತರ್ ಕಾಲೇಜು 34ನೇ ಕ್ರೀಡಾಕೂಟದ 2ನೇ ದಿನವಾದ ಬುಧವಾರ 5 ಹೊಸ ದಾಖಲೆಗಳಾಗಿವೆ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು 3 ಹೊಸ ದಾಖಲೆಗಳನ್ನು, ಉಜಿರೆ ಎಸ್ಡಿಎಂ ಕಾಲೇಜು ಹಾಗೂ ಮಂಗಳೂರು ಪದವು ಕಾಲೇಜು ತಲಾ ಒಂದು ಹೊಸ ದಾಖಲೆಯನ್ನು ಮಾಡಿದೆ. ಮಹಿಳಾ ವಿಭಾಗದ ಡಿಸ್ಕಸ್ ತ್ರೋನಲ್ಲಿ ಮಂಗಳೂರು ಪದವು ಕಾಲೇಜಿನ ಪ್ರಿಯಾಂಕ ಜೆ.ಎಸ್. 41.89 ಮೀ.ದೂರ ಎಸೆದು ಹೊಸ ದಾಖಲೆಯನ್ನು ಮಾಡಿದ್ದಾರೆ. 2013-14ರಲ್ಲಿ ಆಳ್ವಾಸ್ನ ಲಿಖಿತಾ ಕೆ.ಯು ಅವರ 39.43 ಮೀಟರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮಹಿಳಾ ಲಾಂಗ್ ಜಂಪ್ನಲ್ಲಿ ಆಳ್ವಾಸ್ನ ಅಲ್ಗಾ ವಿನ್ನಿ ಜೇಮ್ಸ್ 5.85 ಮೀ ದೂರ ಜಿಗಿದು 2011-12ರಲ್ಲಿ ಆಳ್ವಾಸ್ನ ಜೋಲಿ.ವಿ.ಎಂ ಅವರ 5.78 ಮೀ. ದಾಖಲೆಯನ್ನು ಅಳಿಸಿದ್ದಾರೆ. ಉಜಿರೆ ಎಸ್ಡಿಎಂ ರಾಣಿ ಕೆ.ಬಿ. 5ಸಾವಿರ ಮೀ ನಡಿಗೆಯನ್ನು 27 ನಿಮಿಷ 01.0ಸೆಕೆಂಡ್ಸ್ ಕ್ರಮಿಸಿ 2013-14ರ ತನ್ನದೇ 27:30.6 ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಪುರುಷರ ವಿಭಾಗದಲ್ಲಿ 110ಮೀ ಹರ್ಡಲ್ಸ್ ಅನ್ನು ಆಳ್ವಾಸ್ನ ಸುಮಂತ್.ಎಂ.ಕೆ. 14.5 ಸೆಕೆಂಡ್ಸ್ನಲ್ಲಿ ಕ್ರಮಿಸಿ 2013-14ರ 14.9 ತನ್ನದೇ ದಾಖಲೆಯನ್ನು ಮುರಿದಿದ್ದಾರೆ. ಪುರುಷರ ವಿಭಾಗದ ಡಿಸ್ಕಸ್ ತ್ರೋನಲ್ಲಿ ಆಳ್ವಾಸ್ ಕಾಲೇಜಿನ ವಿಷ್ಣುವರ್ಧನ 44.40 ಮೀ ದೂರ ಎಸೆದು, ಅದೇ ಕಾಲೇಜಿನ ಶೀತಲ್ ಕುಮಾರ್ 2010-14 ಮಾಡಿದ 41.34 ಮೀ ದಾಖಲೆಯನ್ನು ಅಳಿಸಿದ್ದಾರೆ.
ಫಲಿತಾಂಶ:
ಪುರುಷರ ವಿಭಾಗ:
ಡಿಸ್ಕಸ್ ತ್ರೋ- ವಿಷ್ಣವರ್ಧನ್.ಆರ್., ಆಳ್ವಾಸ್ (ಪ್ರ), ವಿಖ್ಯಾತ್, ಮಂಗಳೂರು ಎಸ್ಡಿಎಂ ಮ್ಯಾನೇಜ್ಮೆಂಟ್ ಕಾಲೇಜು (ದ್ವಿ), ಗೌತಮ್.ಜಿ, ಆಳ್ವಾಸ್(ತೃ)
110ಮೀ ಹರ್ಡಲ್ಸ್-ಸುಮಂತ್.ಎಂ.ಕೆ.,ಆಳ್ವಾಸ್(ಪ್ರ), ಶ್ರೀಕಾಂತ್ ಮಧ್ಯಸ್ಥ, ಆಳ್ವಾಸ್(ದ್ವಿ), ಸಮರ್ಥ್ ಉದ್ಯಾವರ, ಮಣಿಪಾಲ ಎಂಜಿಎಂ( ತೃ).
5 ಸಾವಿರ ಮೀ-ಅಭಿಷೇಕ್, ಆಳ್ವಾಸ್(ಪ್ರ), ಮಹೇಶ್ ಕುಮಾರ್.ಎ.( ದ್ವಿ), ರಾಜೇಶ್.ಕೆ.ಎಸ್. ಉಜಿರೆ ಎಸ್ಡಿಎಂ(ತೃ)
20 ಕಿ.ಮೀ ನಡಿಗೆ- ವಿನಯಚಂದ್ರ,ಉಜಿರೆ ಎಸ್ಡಿಎಂ( ಪ್ರ), ಅಣ್ಣಪ್ಪ ನಾಕ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು(ದ್ವಿ)
400ಮೀ- ಅನ್ಮೊಲ್ ಶೆಟ್ಟಿ, ಮಂಗಳೂರು ಪದವು ಕಾಲೇಜು(ಪ್ರ), ಮಹಮ್ಮದ್ ಶೇರ್ಶದ್, ಆಳ್ವಾಸ್ ಮೂಡುಬಿದರೆ(ದ್ವಿ), ಚರಣ್.ಕೆ.ಬಿ, ಆಳ್ವಾಸ್ (ತೃ)
ಲಾಂಗ್ ಜಂಪ್- ಅವಿನ್ ಕುಮಾರ್.ಕೆ, ಆಳ್ವಾಸ್(ಪ್ರ), ಸಮೀರ್.ಎಸ್.ಇ, ಆಳ್ವಾಸ್(ದ್ವಿ), ವಿನೋದ್.ವಿ.ನಾಕ್, ಉಜಿರೆ ಎಸ್ಡಿಎಂ(ತೃ)
ಮಹಿಳಾ ವಿಭಾಗ:
5 ಸಾವಿರ ಮೀ- ಸೌಮ್ಯ.ಕೆ, ಆಳ್ವಾಸ್(ಪ್ರ), ಅಕ್ಷತಾ.ಎಸ್(ದ್ವಿ), ಬಿಂದು.ಕೆ., ನಿಟ್ಟೆ ಎನ್ಎಸ್ಎಎಂಎಫ್ಜಿಸಿ(ತೃ)
ಡಿಸ್ಕಸ್ ತ್ರೋ- ಪ್ರಿಯಾಂಕ ಜೆ.ಎಸ್, ಪದವು ಕಾಲೇಜು(ಪ್ರ), ನವ್ಯಾ, ಗೋಣಿಕೊಪ್ಪ ಕಾವೇರಿ ಕಾಲೇಜು(ದ್ವಿ), ಲಿಖಿತಾ.ಕೆ.ವಿ, ಆಳ್ವಾಸ್(ತೃ)
ಲಾಂಗ್ಜಂಪ್-ಅಲ್ಗಾ ವಿನ್ನಿ ಜೇಮ್ಸ್, ಆಳ್ವಾಸ್(ಪ್ರ), ಪ್ರಿಯಾ.ಎ., ಉಜಿರೆ ಎಸ್ಡಿಎಂ(ದ್ವಿ), ಶಿಲ್ಪಾ ಚಾಕೋ, ಆಳ್ವಾಸ್(ತೃ)
100ಮೀ ಹರ್ಡಲ್ಸ್- ಶಿಮೋನಾ ಮಸ್ಕರೆನಸ್, ಆಳ್ವಾಸ್( ಪ್ರ), ಗನಿಮಾ.ಎ, ಆಳ್ವಾಸ್(ದ್ವಿ), ರೋಜಾ.ಎಚ್.ಸಿ, ಉಜಿರೆ ಎಸ್ಡಿಎಂ(ತೃ)
400ಮೀ- ಸಿಂದ್ಯಾ ಮೋಲ್, ಆಳ್ವಾಸ್(ಪ್ರ), ಮೇಘಾ, ಆಳ್ವಾಸ್(ದ್ವಿ), ಉಮಾ ಭಾಗ್ಯಲಕ್ಷ್ಮೀ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು(ತೃ)
ಹ್ಯಾಮರ್ ತ್ರೋ- ಸೌಭಾಗ್ಯ ಲಕ್ಷ್ಮೀ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು(ಪ್ರ), ಪುಣ್ಯಶ್ರೀ ಎಸ್.ವೈ, ಆಳ್ವಾಸ್(ದ್ವಿ), ರಶ್ಮಿ.ಕೆ, ಆಳ್ವಾಸ್ ದೈ.ಶಿ.ಕಾಲೇಜು(ತೃ).
5 ಸಾವಿರ ನಡಿಗೆ- ರಾಣಿ.ಕೆ.ಬಿ, ಉಜಿರೆ ಎಸ್ಡಿಎಂ( ಪ್ರ), ವಿಲ್ಮಾ.ಡಿ.ಸೋಜಾ, ಉಜಿರೆ ಎಸ್ಡಿಎಂ(ದ್ವಿ), ಸ್ಮಿತಾ.ಎಚ್.ಡಿ, ಆಳ್ವಾಸ್(ತೃ)
18-12(1)

 

18-12(2)

By suddi9

Leave a Reply

Your email address will not be published. Required fields are marked *