ಗುರುಪುರ : ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ, ಪಕ್ಷ ಸೇರ್ಪಡೆ, ಎಸ್ಐಆರ್ ಹಾಗೂ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್(ಬಿಎಲ್ಪಿ) ಅವರ ಅಧ್ಯಕ್ಷತೆಯಲ್ಲಿ ಜೂ. ೧೮ರಂದು ಗುರುಪುರ-ಪೊಳಲಿ ದ್ವಾರದ ಬಳಿ ಇರುವ ಸಮಿತಿ ಕಚೇರಿಯಲ್ಲಿ ಕಾರ್ಯಕರ್ತರ ವಿಶೇಷ ಸಭೆ ನಡೆಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಪಕ್ಷ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ. ಮುಖ್ಯಮಂತ್ರಿ ಡಿಕೆಶಿ ಅವರು ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲು ಉದ್ದೇಶಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ಆಸ್ತಿ. ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಕಾರ್ಯಕರ್ತರು ಬೆಂಗಳೂರಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎಸ್ಐಆರ್ ವಿಷಯದಲ್ಲಿ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗಬೇಕು ಎಂದರು.

ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಅವರು ಕಾಂಗ್ರೆಸ್ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಮುಂದಿನ ಚುನಾವಣೆಯಲ್ಲಿ ಇನಾಯತ್ ಅಲಿ ಬಹುಮತದಿಂದ ಗೆಲ್ಲುವಲ್ಲಿ ನಮ್ಮೆಲ್ಲರ ಶ್ರಮವಿರಬೇಕು ಎಂದು ಹೇಳಿದರು.

ಕಾಂಗ್ರೆಸ್ ನಾಯಕಿ ಶಾಂತಲಾ ಗಟ್ಟಿ ಮತ್ತು ರಾಜ್ಕುಮಾರ್ ಶೆಟ್ಟಿ ಅವರು ಎಸ್ಐಆರ್ ವಿಷಯದಲ್ಲಿ ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಪ್ರಥ್ವೀರಾಜ್ ಆರ್. ಕೆ, ಗಿರೀಶ್ ಆಳ್ವ, ಗಣೇಶ್ ಗಂಜಿಮಠ, ಜಯಲಕ್ಷ್ಮೀ, ನೂರ್ ಅಹ್ಮದ್, ಬಾಷಾ ಗುರುಪುರ, ಕೃಷ್ಣ ಅಮೀನ್, ಬೂಬ ಪೂಜಾರಿ, ಸ್ವರೂಪ್ ರೈ, ಸಮಿತಿ ಪದಾಧಿಕಾರಿಗಳು, ಪಕ್ಷ ಪ್ರಮುಖರು, ಬಿಎಲ್ಎಗಳು, ಗ್ರಾಪಂ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ ೨೫ ವರ್ಷಗಳಿಂದ ಸಿಪಿಎಂನಲ್ಲಿದ್ದ ಜಯ ಪರಾರಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ ಅವರು ನಿರೂಪಿಸಿದರು.
