ಬಂಟ್ವಾಳ: ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸ್ಟ್ರಕ್ಚರ್ ಮಿಷನ್ ಹಾಗೂ ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ  65 ಲಕ್ಷ ರೂ.ವೆಚ್ಚದಲ್ಲಿ ಕಲ್ಲಡ್ಕ ಸಮೀಪದ ಅಮ್ಟೂರುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ  ಆರೋಗ್ಯ ಕ್ಷೇಮ ಕೇಂದ್ರದ ಕಾಮಗಾರಿಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ  ಬಂಟ್ವಾಳ ಶಾಸಕ ರಾಜೇಶ್ ನಾಯಕಗ ಜೊತೆಗೆ  ವೀಕ್ಷಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಜಿಲ್ಲೆಗೆ 80 ಕೋಟಿ ರೂಪಾಯಿ ಅನುದಾನವನ್ನು   ಬಂಟ್ವಾಳ ವಿಧಾನಸಭಾ ಕ್ಷೇತ್ರದ 22 ಆರೋಗ್ಯ ಕ್ಷೇಮ ಕೇಂದ್ರಕ್ಕೆ 14.30 ಕೋಟಿ ರೂ. ಹಾಗೂ ವಿಶೇಷವಾಗಿ ಆಮ್ಟೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಕ್ಷೇಮ ಕೇಂದ್ರಕ್ಕೆ  65 ಲಕ್ಷ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ ಎಂದು  ತಿಳಿಸಿದರು.

ಇದೇ ವೇಳೆ ಸಂಸದರು ಹಾಗೂ ಸಾಸಕರು ಗಿಡ ನೆಟ್ಟರು. ಬಂಟ್ವಾಳಶಾಸಕ  ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಗಳಾದ  ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು,  ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳು ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಪಕ್ಷದ  ಪ್ರಮುಖರಾದ ಮಾಧವ ಮಾವೆ, ಮೋನಪ್ಪ ದೇವಸ್ಯ,ಚಿದಾನಂದ ಮುರಬೈಲು ಗೋಪಾಲ ಪೂಜಾರಿ,ಲಖೀತಾ ಆರ್ ಶೆಟ್ಟಿ. ಪುಷ್ಪರಾಜ್ ಚೌಟ, ಅಭಿಷೇಕ್ ರೈ, ಆನಂದ ಎ ಶಂಬೂರು, ಜಿನರಾಜ್ ಕೋಟ್ಯಾನ್,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರೇಮ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಮಹಾಬಲ ಸಾಲಿಯನ್ ಮೂಳಿಕೊಡಂಗೆ, ಬಂಟ್ವಾಳ ಮಂಡಲದ ಯುವ ಮೋರ್ಚ ಕಾರ್ಯದರ್ಶಿ ಕೌಶಿಲ್ ಶೆಟ್ಟಿ ಬಾಳಿಕೆ,ಬಂಟ್ವಾಳ ಮಂಡಲದ ಓಬಿಸಿ ಮೋರ್ಚ ಕಾರ್ಯದರ್ಶಿ ಯತೀಶ್ ಮೂಳಿಕೊಡಂಗೆ, ಆಮ್ಟೂರು ಶಕ್ತಿ ಕೇಂದ್ರ ಪ್ರಮುಖರಾದ  ಪ್ರವೀಣ್ ಕುಮಾರ್ ರಾಯಪ್ಪ ಕೋಡಿ, ಸಂಪತ್ ಕೋಟ್ಯಾನ್ ಕಡೇಶಿವಾಲಯ ಹಾಗೂ ಬೂತ್ ಅಧ್ಯಕ್ಷರುಗಳಾದ  ಶೇಖರ್ ಕೊಟ್ಟಾರಿ, ಸತೀಶ್ ಪೂಜಾರಿ, ಬೂತ್ ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಬೈದರಡ್ಕ ದಾಮೋದರ ಪೂಜಾರಿ, ಪ್ರಮುಖರಾದ ಗೋಪಾಲಕೃಷ್ಣ ಪೂವಳ, ನವೀನ್ ಕೊಟ್ಟಾರಿ,ಜಯಂತಗೌಡ, ರಮೇಶ್ ಕರಿಂಗಾಣ,ಉಮೇಶ್ ಟಿ ಪೂಜಾರಿ ಗಂಗಾಧರ ಕುಲಾಲ್,ಮೋಹನ್ ಕುಲಾಲ್, ಜಯಶ್ರೀ ಕಲ್ಲಡ್ಕ ದೇವಕಿ ದಿವಾಕರ ಪೂಜಾರಿ,ಸುಮಾ ಶ್ರೀಧರ ಪೂಜಾರಿ,ಪ್ರಮೀಳಾ ವಸಂತ ಪೂಜಾರಿ ,ತ್ರಿವೇಣಿ ದಿನೇಶ್, ರಾಕೇಶ್ ಬಜಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು 

By Suddi9

Leave a Reply

Your email address will not be published. Required fields are marked *