ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯ ೨೦೨೬-೨೭ ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆ ಮಾಡಲಾಯಿತು.
 
 
ವಿದ್ಯಾರ್ಥಿ ಸಂಸತ್ತಿನ ರಚನೆಯ ಅಂಗವಾಗಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಚಾರದೊಂದಿಗೆ ಮತದಾನವು ನಡೆಯಿತು.
 ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶಿಕ್ಷಕಿ  ಗಾಯತ್ರಿ ಮತ್ತು ಸಂಘದ ಎಲ್ಲಾ ಸದಸ್ಯರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿತು. ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮತಚಲಾಯಿಸಿದರು. ವಿದ್ಯಾರ್ಥಿ ಸಂಘದ ನಾಯಕರಾಗಿ 10 ನೇ ತರಗತಿಯ ಭವಿಷ್ ಎಲ್ ಪೂಜಾರಿ ಆಯ್ಕೆಯಾಗಿದ್ದು, ಉಪನಾಯಕನಾಗಿ ಅನೂಪ್ ರಾಜೇಶ್  9 ನೇ, ಯೋಜನಾಧಿಕಾರಿಯಾಗಿ  ಸ್ನೇಹಲ್ ಗಾಣಿಗ ೧೦ ನೇ ತರಗತಿ ಅವರು ಆಯ್ಕೆಯಾದರು. 
ಪ್ರೌಢಶಾಲಾ ಮುಖ್ಯೋಪಾಧ್ಯಯರಾದ  ಹರಿಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ  ಚೈತ್ರ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ  ವೀಣಾ ದೇವಾಡಿಗ ಇವರ ಮಾರ್ಗದರ್ಶನದಲ್ಲಿ ಚುನಾವಣೆ  ನಡೆಸಲಾಯಿತು. 

By Suddi9

Leave a Reply

Your email address will not be published. Required fields are marked *