ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ. ಟ್ರಸ್ಟ್ ಇದರ ಬಿ ಸಿ ರೋಡ್ ವಲಯ ಮೊಡಂಕಾಪು ದೀಪಿಕಾ ಪ್ರೌಢಶಾಲೆ ಇದರ ಸಂಯುಕ್ತಾಶ್ರಯದಲ್ಲಿ ಪರಿಸರ ಮಾಹಿತಿ  ಮತ್ತು ಗಿಡ ನಾಟಿ ಕಾರ್ಯಕ್ರಮವು ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಠಾರದಲ್ಲಿ ಸೋಮವಾರ ನಡೆಯಿತು.

ಬಂಟ್ವಾಳ ತಾಲೂಕಿನ ಅರಣ್ಯಾಧಿಕಾರಿ  ಕೃಷ್ಣ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಕ್ಕಳು‌ತಮ್ಮ  ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನಾಟಿ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕೆಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕರಾದ  ಭಾಸ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೀಪಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಸಾಧು ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಈ ಕಾರ್ಯಕ್ರಮವು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ಪರಿಸರ,ಚಿತ್ರಕಲೆ , ಪ್ರಬಂಧ , ಪರಿಸರ ಗೀತೆ ಸ್ಪರ್ಧೆ ನಡೆಸಲಾಯಿತು.ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಿ.ಮೂಡ ಒಕ್ಕೂಟದ ಉಪಾಧ್ಯಕ್ಷರಾದ  ಪದ್ಮಾವತಿ ಮೋಡಂಕಾಪು, ಅರಣ್ಯ ಇಲಾಖೆಯ  ರೇಖಾ ಅವರು ಉಪಸ್ಥಿತರಿದ್ದರು.  ಶಾಲೆಯ ಎಲ್ಲಾ ಶಿಕ್ಷಕರು, ಒಕ್ಕೂಟದ ಪದಾಧಿಕಾರಿಗಳಾದ ಉಮೇಶ್, ದೇವಕಿ ಹಾಗೂ ಶಾಲಾ  ಮಕ್ಕಳು ಉಪಸ್ಥಿತರಿದ್ದರು.
ಬಿ ಮೂಡ ಒಕ್ಕೂಟದ ಸೇವಾಪ್ರತಿನಿಧಿ  ಆಶಾಲತಾ ಅವರು  ಸ್ವಾಗತಿಸಿದರು. ಮಕ್ಕಳಿಗೆ ಪರಿಸರದ ಘೋಷಣೆಗಳನ್ನು ಘೋಷಿಸಲಾಯಿತು.  ಶಿಕ್ಷಕಿ ಶಾಲಿನಿ ವಂದಿಸಿದರು.  ಬಿ ಸಿ ರೋಡು ವಲಯದ ಮೇಲ್ವಿಚಾರಕರಾದ  ಗಿರೀಶ್  ನಿರ್ವಹಿಸಿದರು.* 

By Suddi9

Leave a Reply

Your email address will not be published. Required fields are marked *