ಬಂಟ್ವಾಳ: ಕರಿಯಂಗಳ ಗ್ರಾಮದ ಪೊಳಲಿ ದೇವಳದ ಪಕ್ಕದಲ್ಲಿರುವ  ಪಂಪ್‌ ಶೆಡ್ಡಿನಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.


ಮೃತರನ್ನು ಮಾಯಿಲ ಎಂಬವರ ಪುತ್ರನಾಗಿರುವ ಡೊಂಬಯ್ಯ ಎಂದು ಗುರುತಿಸಲಾಗಿದ್ದು,  ಸುಮಾರು 64ವರ್ಷ ಪ್ರಾಯ ವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಪ್ಪು ಮೈಬಣ್ಣ, ಸಪೂರ ಶರೀರ, ಕಪ್ಪು ಮಿಶ್ರಿತ ಬಿಳಿ ಕೆದರಿದ ಉದ್ದನೆಯ ತಲೆಗೂದಲು, ಬಿಳಿ ಉದ್ಧನೆಯ ಗಡ್ಡ, ಬಲಗಾಲಿನ ಪಾದದ ಮೇಲೆ ಗಾಯಕ್ಕೆ ಹಾಕಿರುವ ಆಸ್ಪತ್ರೆಯ ಬ್ಯಾಂಡೇಜ್‌ ಇದ್ದು, ಕುಂಕುಮ ಬಣ್ನದ ಅಂಗಿ, ತಿಳಿ ಹಳದಿ ಪಂಚೆ ಇರುತ್ತದೆ.ವಾರೀಸುದಾರರು ಇದ್ದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ (08255- 235000; 9480805308) ಸಂಪರ್ಕಿಸುವಂತೆ ಕೋರಲಾಗಿದೆ


ಕಳೆದ 7-8 ವರ್ಷದಿಂದ ಪೊಳಲಿ ದೇವಸ್ಥಾನದ ವಠಾರದಲ್ಲಿ  ಓಡಾಡಿಕೊಂಡು ಕೂಲಿ ಕೆಲಸ ಮಾಡಿ, ದೇವಸ್ಥಾನದ ವಠಾರದಲ್ಲಿಯೇ ರಾತ್ರಿ ಉಳಿದುಕೊಳ್ಳುತ್ತಿದ್ದ ಡೊಂಬಯ್ಯ ಎಂಬವರು ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ದೇವಸ್ಥಾನದ ಅನ್ನಛತ್ರದಲ್ಲಿ ಊಟ ಮಾಡಿಕೊಂಡು ಈ ಪರಿಸರದಲ್ಲೇ  ಬಿಕ್ಷೆ ಬೇಡಿ ಜೀವನ ನಡೆಸುತಿದ್ದರೆನ್ನಲಾಗಿದೆ.
ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾದ ಚಂದ್ರಮೋಹನ್‌ ರವರು  ನೀಡಿರುವ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಹೆಸರು ಮತ್ತು ಪ್ರಾಯವನ್ನು ಆಸ್ಪತ್ರೆಯ ಚೀಟಿಯ ಅಧಾರದಲ್ಲಿ ಗುರುತು ಹಚ್ವಲಾಗಿದೆ.

By Suddi9

Leave a Reply

Your email address will not be published. Required fields are marked *