ಬಂಟ್ವಾಳ: ತಾಲೂಕಿನ ಮಂಚಿಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 16 ಲ.ರೂ.ವೆಚ್ಚದಲ್ಲಿ ನಿರ್ಮಾಣವಾದ ಕೈಯೂರು ಅಂಗನವಾಡಿ ಕಟ್ಟಡ ಮತ್ತು ಸಂಪರ್ಕ ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿದರು.
ಶಾಸಕರ ಅನುದಾನದಲ್ಲಿ ಕೈಯೂರು ಅಂಗನವಾಡಿ ಕಟ್ಟಡ ಮತ್ತು ವಿ.ಪ.ಸದಸ್ಯ ಕಿಶೋರ್ ಕುಮಾರ್ ಅವರ ಶಾಸಕರ ಅನುದಾನ 5 ಲ.ರೂ.ವೆಚ್ಚದಲ್ಲಿ
ಕೆಯ್ಯೂರು ಸ್ಥಾನಮೂಲೆ  ಕಾಂಕ್ರೀಟೀಕರಣಗೊಂಡು ಅಭಿವೃದ್ಧಿಪಡಿಸಲಾದ ಸಂಪರ್ಕ ರಸ್ತೆಯನ್ನು  ಉದ್ಘಾಟಿಸಲಾಯಿತು‌

ಈ ಸಂದರ್ಭದಲ್ಲಿ ಮಾಜಿ ಪಂಚಾಯತ್‌ ಸದಸ್ಯರುಗಳಾದ ಮೋಹನ್ ದಾಸ್ ಶೆಟ್ಟಿ, ಮೋಹನ್‌ ಪ್ರಭು ಕೆ,  ಪ್ರಮೀಳ, ಉಷಾ ಶೆಟ್ಟಿ .ಮಂಚಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಕೇಶವ ರಾವ್,ಪ್ರಭಾಕರ್ ಶೆಟ್ಟಿ,ಸಿಡಿಪಿಒ ಮುಮ್ತಾಜ್, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನಿರ್ಮಾಲಾ,ಅಂಗನವಾಡಿ ಶಿಕ್ಷಕಿ ಚಂದ್ರಿಕಾ,ಅಂಗನವಾಡಿ ಸಹಾಯಕಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *