ಬಂಟ್ವಾಳ :ಯಾವುದೇ ಸಂಘಟನೆಯನ್ನು ಪ್ರಾರಂಭಿಸುವುದು ಸುಲಭ,ಉಳಿಸುವುದು ಕಷ್ಟ ಆದರೆ ವೈದ್ಯನಾಥ ಕ್ರಿಕೆಟರ್ಸ್ ಸಂಘಟನೆಯು ನಮ್ಮ ಧರ್ಮ, ಸಂಸ್ಕೃತಿ ಸಂಸ್ಕಾರದ ಮೇಲಿನ ನಂಬಿಕೆ, ಪ್ರೀತಿಯಿಂದ ಕ್ರಿಕೆಟ್ ಆಟದೊಂದಿಗೆ ಈ ಭಾಗದಲ್ಲಿ 25 ವರ್ಷಗಳಿಂದ ಸಂಘಟನಾತ್ಮಕವಾಗಿ ಸಾಮಾಜಿಕ,ಧಾರ್ಮಿಕವಾಗಿ ತೊಡಗಿಸಿಕೊಂಡು ರಜತ ಸಂಭ್ರಮದ ಆಚರಿಸುವುದು ಹೆಮ್ಮೆಯ ವಿಚಾರ, ಭಾರತೀಯ ಸಂಸ್ಕೃತಿ ಪರಂಪರೆ ಉಳಿಸಲು ಸಂಘಟನಾ ಶಕ್ತಿ ಅಗತ್ಯ ಎಂದು ಬಾ ಜ ಪಾ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಪುದು ಗ್ರಾಮದ ಸುಜೀರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಆವರಣದಲ್ಲಿ ನಡೆದ ವೈದ್ಯನಾಥ ಕ್ರಿಕೆಟರ್ಸ್ ಇದರ ರಜತ ಮಹೋತ್ಸವ ಸಂಭ್ರಮದ ಸಭಾ ಕಾರ್ಯಕ್ತಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು ವಹಿಸಿದ್ದರು,
ದೈವ ಪಾತ್ರಿ ಮುಂಡ ಯಾನೆ ಮೋನಪ್ಪ ಪೂಜಾರಿ ಸುಜೀರು ದೀಪ ಪ್ರಜ್ವಲನಗೈದು ಚಾಲನೆ ನೀಡಿದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣ ಕುಮಾರ್ ಪೂಂಜ,ಪುದು ಗ್ರಾ ಪಂ ಪಿಡಿಓ ಡಾ ಸ್ಮೃತಿ ಯು, ಉದ್ಯಮಿ ಉಮೇಶ ಸಾಲ್ಯಾನ್ ಬೆಂಜನಪದವು, ತಾ ಪಂ ಮಾಜಿ ಸದಸ್ಯ ಗಣೇಶ ಸುವರ್ಣ ತುಂಬೆ,ಅಡ್ಯಾರ್ ಶ್ರೀ ವೀರಾಂಜನೇಯ ದೇವಸ್ಥಾನದ ಅಧ್ಯಕ್ಷ ರಮೇಶ ತುಂಬೆ, ಆದರ್ಶ ಆಟೋ ವರ್ಕ್ಸ್ ಮಾಲಕ ನಾಗೇಶ ಕೊಟ್ಟಾರಿ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಕಲ್ಲಾಜೆ, ಪ್ರ ಕಾರ್ಯದರ್ಶಿ ರಾಜೇಶ್ ಮೆಜಪೆ, ಕೋಶಾಧಿಕಾರಿ ಸುಶಾನ್ ಸುಜೀರು, ವೈದ್ಯನಾಥ ಕ್ರಿಕೆಟರ್ಸ್ ಅಧ್ಯಕ್ಷ ಸತೀಶ್ ಮೆಜಪೆ, ಗೌರವಾಧ್ಯಕ್ಷ ಸಂಜೀವ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕಿಶೋರ್ ಸುಜೀರು ಪ್ರಸ್ತಾವಿಕವಾಗಿ ಮಾತನಾಡಿದರು,ಕು. ಸಿಂಚನ ಪ್ರಾರ್ಥಿಸಿ, ನಾಗೇಶ್ ಅಮೀನ್ ದತ್ತನಗರ ಸ್ವಾಗತಿಸಿದರು, ಯಶೋದಾ ಜಯಂತ್ ವಂದಿಸಿದರು,ನಿಖಿತ್ ಕೊಟ್ಟಾರಿ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.ಇದಕ್ಕು ಮುನ್ನ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ,ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಜೋಡು ಜೀಟಿಗೆ ತುಳು ನಾಟಕ ಪ್ರದರ್ಶನಗೊಂಡಿತು.
