ಪೊಳಲಿ: ತಿಹಾಸ ಪ್ರಸಿದ್ಧ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 29 ದಿನದ ಜಾತ್ರಾ ಮಹೋತ್ಸವ ಸಂಪನ್ನ ಗೊಂಡ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹೈ ಕೋರ್ಟ್ ಎಚ್. ಪಿ. ಸಂದೇಶ್ ಅವರು ಸೋಮವಾರ ಶ್ರೀ ಕ್ಷೇತ್ರ ಪೊಳಲಿಗೆ ಬೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕರಾದ ಪರಮೇಶ್ವರ ಭಟ್ ಅವರು ನ್ಯಾಯಾಧೀಶರಿಗೆ ದೇವರ ಪ್ರಸಾದವನ್ನಿತ್ತು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಚಂದ್ರಮೋಹನ್ ಅವರು ನ್ಯಾಯಧೀಶರಿಗೆ ಕ್ಷೇತ್ರದ ಐತಿಹ್ಯ ಸಹಿತ ಸಂಪೂರ್ಣ ಮಾಹಿತಿ ನೀಡಿದರು. ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಸವರಾಜ್, ಹಿರಿಯ ಸಿವಿಲ್ ನ್ಯಾಯಧೀಶರಾದ ಅನಿಲ್ ಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಧೀಶರಾದ ರಾಜೇಂದ್ರ ಪ್ರಸಾದ್ ಮತ್ತಿತರರು ದೇವರ ಪ್ರಸಾದ ಸ್ವೀಕರಿಸಿದರು. ಉಳಿಪಾಡಿಗುತ್ತು ಸುಭಾಶ್ ಚಂದ್ರ ನಾಯ್ಕ್ ಉಪಸ್ಥಿತರಿದ್ದರು.

ಪೊಳಲಿ ಕ್ಷೇತ್ರದಲ್ಲಿ  29 ದಿನ ಗಳ ಅದ್ದೂರಿಯ ಜಾತ್ರಾ ಮಹೋತ್ಸವವು ಭಾನುವಾರ ರಾತ್ರಿ ದೇವರ ಅವಭೃತಸ್ನಾನದ ಬಳಿಕ  ಸಂಪನ್ನ ಗೊಂಡಿತು. 

By suddi9

Leave a Reply

Your email address will not be published. Required fields are marked *