ಬಂಟ್ವಾಳ  :ತಾಲೂಕಿನ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಭರತನಾಟ್ಯ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆತ್ಮಿ ಶೆಟ್ಟಿ ಇವರ ಭರತನಾಟ್ಯ “ರಂಗ ಪ್ರವೇಶ”  ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಅದ್ದೂಯಾಗಿ ನಡೆಯಿತು.
ಇದಕ್ಕು ಮೊದಲು ಪುತ್ತೂರು ವಿಶ್ವಕಲಾನಿಕೇತನ ಸಂಸ್ಥೆಯ ನಿರ್ದೇಶಕಿ, ನೃತ್ಯಗುರು ವಿದುಷಿ ನಯನ ವಿ.ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಒಂದು ಕಾಲದಲ್ಲಿ ಅಸಡ್ಡೆಯಿಂದ ಕಾಣುತ್ತಿದ್ದ ನೃತ್ಯಕ್ಷೇತ್ರ ಇಂದು ಎಲ್ಲರೂ ಗೌರವಿಸುವ ಕಲೆಯಾಗಿ ಮಾರ್ಪಾಡು ಹೊಂದಿರುವುದು ಅಭಿಮಾನದ ಸಂಗತಿ, ತಾಳ್ಮೆ, ಸಹನೆ ಇದ್ದಾಗ ಮಾತ್ರ ಭರತನಾಟ್ಯದಂತಹ ಕಲೆಯನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರು,ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ,
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ವನ್ನು ನೀಡಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ, ಹೆತ್ತವರು ತಮ್ಮಮಕ್ಕಳನ್ನು ಯಾವುದಾದರೊಂದು ಕಲಾಶಿಕ್ಷಣ ಮೈಗೂಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಕಲೆಯನ್ನು ಕಲಿಯುವ ನಿಟ್ಟಿನಲ್ಲಿ
ಪೂರಕವಾದ ವಾತಾವರಣ ಏರ್ಪಡಿಸುವ ಹೊಣೆಗಾರಿಕೆ ಹೆತ್ತವರ ಮೇಲಿದೆ ಎಂದ ಅವರು,ಕು. ಆತ್ಮಿ ಶೆಟ್ಟಿಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ನೃತ್ಯಗುರು ವಿದುಷಿ ವಿದ್ಯಾಮನೋಜ್ ಮಾತನಾಡಿ, ಆತ್ಮಿ ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಯಾವುದೇ ಕೆಲಸವನ್ನು ಬದ್ಧತೆಯಿಂದ ಮಾಡಬಲ್ಲವಳು, ರಂಗಪ್ರವೇಶದ ಮೂಲಕ ನೃತ್ಯಕ್ಷೇತ್ರದ ಅಪೂರ್ವ ಘಟ್ಟವನ್ನು ತಲುಪಿರುವುದು ಸಂತಸ ತಂದಿದೆ ಎಂದರು.
ಹೊಟೇಲ್ ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ,
ನೃತ್ಯಗಿರಿ ಮೈಸೂರು ಭರತನಾಟ್ಯ ಸಂಸ್ಥೆಯ ನಿರ್ದೇಶಕರಾದ ಡಾ. ಕೃಪಾ ಪಡೆಯವರು ಶುಭ ಹಾರೈಸಿದರು.ಈ ಸಂದರ್ಭ ನೃತ್ಯಗುರು ವಿದುಷಿ ವಿದ್ಯಾಮನೋಜ್ ಅವರನ್ನು ಗೌರವಿಸಲಾಯಿತು.
ಕು.ಆತ್ಮಿ ಶೆಟ್ಟಿಯ ಹೆತ್ತವರಾದ ಉದಯ ಕುಮಾರ್ ಶೆಟ್ಟಿ, ಶಾಲಿನಿ ಶೆಟ್ಟಿ, ಮಾವ ಸಂತೋಷ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಖೇಶ್ ಶೆಟ್ಟಿ ವಂದಿಸಿದರು. ದೀಪಕ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *