ಅಮೃತೇಶ್ವರ ದೇವಳದ ವಾರ್ಷಿಕ ಉತ್ಸವ

ಗುರುಪುರ : ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಎ. ೧೩ರಿಂದ ೨೩ರವರೆಗೆ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಕಾಲಾವಧಿ ಉತ್ಸವ ಜರುಗಲಿದೆ.

ಎ. ೧೩ರಂದು ಬೆಳಿಗ್ಗೆ ೯:೩೦ಕ್ಕೆ ಶತರುದ್ರಾಭಿಷೇಕ, ಎ. ೧೪ ಮೇಷ ಸಂಕ್ರಮಣದAದು ಬೆಳಿಗ್ಗೆ ೧೦೮ ಕಾಯಿ ಗಣಯಾಗ, ರಾತ್ರಿ ೭:೩೦ಕ್ಕೆ ಧ್ವಜಾರೋಹಣಗೊಳ್ಳಲಿದೆ.

ಎ. ೧೫ರಂದು ಬೆಳಿಗ್ಗೆ ೭ಕ್ಕೆ ದೀಪದ ಬಲಿ ಉತ್ಸವ(ಯುಗಾದಿ) ಪಂಚಾAಗ ಶ್ರವಣ, ತಪ್ಪಂಗಾಯಿ ನಡೆದರೆ, ಎ. ೧೬ರಂದು ಸಂಜೆ ೬ಕ್ಕೆ ಪ್ರಥಮ ಚೆಂಡು, ಬಯನ ಬಲಿ ಉತ್ಸವ `ಅಷ್ಟಾವಧಾನ’. ಎ. ೧೭ರಂದು ಭಜನೆ, ೨ನೇ ಚೆಂಡು, ಎ. ೧೮ರಂದು ೩ನೇ ಚೆಂಡು, ಎ. ೧೯ರಂದು ೪ನೇ ಚೆಂಡು, ರಾತ್ರಿ ೭ಕ್ಕೆ ಚಂದ್ರಮAಡಲೋತ್ಸವ, ಶ್ರೀ ಕೊಡಮಣಿತ್ತಾಯ ದೈವದ ಭೇಟಿ, ಎ. ೨೦ರಂದು ಕಡೇ(೫ನೇ) ಚೆಂಡು ನಡೆಯಲಿದೆ.

ಎ. ೨೧ರಂದು ಸಂಜೆ ೮ಕ್ಕೆ ರಥೋತ್ಸವ, ಎ. ೨೨ರಂದು ಬೆಳಿಗ್ಗೆ ೯ರಿಂದ ತುಲಾಭಾರ ಸೇವೆ, ಬಲಿ ಹೊರಟು ಓಕುಳಿ, ಅವಭೃತ ನಡೆಯಲಿದೆ. ಎ. ೨೩ರಂದು ರಾತ್ರಿ ೭:೩೦ರಿಂದ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮ ನಡೆಯಲಿದೆ.

ಹೊರೆಕಾಣಿಕೆ :

ಎ. ೧೬ರಂದು ಸಂಜೆ ೪:೩೦ಕ್ಕೆ ವಿಜಯಲಕ್ಷಿö್ಮÃ ಫ್ರೆಂಡ್ಸ್ ಕ್ಲಬ್ ಪರಾರಿ-ವಾಮಂಜೂರು ಶ್ರೀ ರಾಮ ಮಂದಿರದಿAದ, ಎ. ೧೯ರಂದು ಪಡುಬದಿನಡಿ ದೈವಸ್ಥಾನ ಮತ್ತು ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಿ ಬರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ :

ಎ. ೧೪ರಂದು ರಾತ್ರಿ ೯:೩೦ಕ್ಕೆ ಯುವ ಪ್ರತಿಭೆಗಳಿಂದ ಯಕ್ಷ ನೃತ್ಯರಂಗ ಸಮಾಗಮ, ಎ. ೧೫ರಂದು ಬೆಳಿಗ್ಗೆ ೧೧:೩೦ಕ್ಕೆ ಯಕ್ಷ ಗಾನವೈಭವ, ರಾತ್ರಿ ೯:೩೦ಕ್ಕೆ ಕಲಾವರ್ಧಕ ಯುವಕ ಮಂಡಲ(ರಿ) ನಾರಾಳ ಸಂಕೇಶ ಸದಸ್ಯರಿಂದ `ಪಿರ ಬನ್ನಗ’ ತುಳು ನಾಟಕ, ಎ. ೧೬ರಂದು ಸಂಜೆ ೬:೩೦ಕ್ಕೆ ನಾರಸಿಂಹ ನೃತ್ಯ ರೂಪಕ, ಅಷ್ಟಾವಧಾನ, ಎ. ೧೭ರಂದು ರಾತ್ರಿ ೯:೩೦ಕ್ಕೆ ಕಲಾಮೃತ ಕಲಾವಿದರು(ರಿ) ಅಭಿನಯದ `ಬದ್ಕುನ್ ಎಂಚ ?’ ತುಳು ಸಾಂಸಾರಿಕ ನಾಟಕ, ಎ. ೧೮ರಂದು ಸಂಜೆ ೫ಕ್ಕೆ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ವಾಮಂಜೂರು ಇವರಿಂದ `ಸಹಸ್ರ ಕವಚ ಮೋಕ್ಷ’ ಯಕ್ಷಗಾನ, ರಾತ್ರಿ ೯:೩೦ಕ್ಕೆ `ರುಕ್ಮಾಂಗದ ಚರಿತ್ರೆ’ ಯಕ್ಷಗಾನ, ಎ. ೧೯ರಂದು ಸಂಜೆ ೬ಕ್ಕೆ ಪುರುಷೋತ್ತಮ ಪೂಂಜ ವಿರಚಿತ `ಸಿಂಧೂರ ಸಂಗ್ರಾಮ’, ೯:೩೦ಕ್ಕೆ ಶ್ರೀ ಮಹಮ್ಮಾಯಿ ರಂಗ ಕಲಾವಿದರು ಉಳಾಯಿಬೆಟ್ಟು ತಂಡದಿAದ `ನಿಕ್ಕ್ ಗೊತ್ತುಂಡಾ ?’ ಹಾಸ್ಯಮಯ ನಾಟಕ, ಎ. ೨೦ರಂದು ಸಂಜೆ ೬:೩೦ಕ್ಕೆ ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ `ಗಿರಿಜಾ ಕಲ್ಯಾಣ-ಕಾರ್ತಿಕೇಯ ಕಲ್ಯಾಣ’ ಯಕ್ಷಗಾನ, ಎ. ೨೧ರಂದು ಮಧ್ಯಾಹ್ನ ೨ಕ್ಕೆ ಭಕ್ತಿ ಸಂಗೀತ ರಸಧಾರೆ, ಸಂಜೆ ೪ಕ್ಕೆ ನೃತ್ಯಾರ್ಪಣಂ, ೬ಕ್ಕೆ ಭಕ್ತಿ ರಸಮಂಜರಿ, ಎ. ೨೨ರಂದು ರಾತ್ರಿ ೯:೩೦ಕ್ಕೆ ವಿಧಾತ್ರಿ ಕಲಾವಿದರು ಕುಡ್ಲ(ರಿ) ತಂಡದಿAದ `ಜೈ ಹನುಮಾನ್’ ಸಿನಿ ನಾಟಕ, ಎ. ೨೫ರಂದು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದಿಂದ ಸನಾತನ ಯಕ್ಷಗಾನ ಸ್ಪರ್ಧೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *