ಬಂಟ್ವಾಳ:  ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕ, ಮಧ್ವ ಇದರ 15ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ನಡೆಯಿತು.
ಓಂಕಾರ ಭಜನಾ ಮಂಡಳಿಯ ಬಾಲ ಭಜಕರಿಂದ ಭಜನಾ ಸೇವೆ, ನಂತರ ಮದ್ವ ಮಂಟಪದಲ್ಲಿ ಕಾಡಬೆಟ್ಟು ಶ್ರೀ ನಾರಾಯಣ ಶಿಬರಾಯರವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನೆರವೇರಿತು.ರಾತ್ರಿ ಓಂಕಾರ ಭಜನಾ ತಂಡದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭಓಂಕಾರ ಫ್ರೆಂಡ್ಸ್ ಅಧ್ಯಕ್ಷರಾದ  ಬಾಲಕೃಷ್ಣ ಗೌಡ ಪಾದೆಬೆಟ್ಟು ರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು  ಶ್ರೀ ಕ್ಷೇತ್ರ ಕಾರಿಂಜದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ವೀರೇಂದ್ರ ಬಿ. ಅಮೀನ್ ವಗ್ಗ ಅವರು ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕರಾದ  ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಂಘಟನೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಯುವ ಉದ್ಯಮಿ  ಸಂದೇಶ್ ಶೆಟ್ಟಿ ಅರೆಬೆಟ್ಟು, ಮಾಜಿ ಜಿ.ಪಂ. ಉಪಾಧ್ಯಕ್ಷ  ಎಂ. ತುಂಗಪ್ಪ ಬಂಗೇರ, ಕಿಯೋನಿಕ್ಸ್ ಮಾಜಿ ಅಧ್ಯಕ್ಷರಾದ  ಹರಿಕೃಷ್ಣ ಬಂಟ್ವಾಳ,  ಬಂಟ್ವಾಳ ನಗರ ಯೋಜನಾ  ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಬಂಟ್ವಾಳ ಮಂಡಲ  ಅಧ್ಯಕ್ಷ  ಚೆನ್ನಪ್ಪ ಕೋಟ್ಯಾನ್ , ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿ ಸುದರ್ಶನ್ ಬಜ, ಯುವವಾಹಿನಿ (ರಿ.) ಬಂಟ್ವಾಳ ಘಟಕ  ಅಧ್ಯಕ್ಷ  ನಾಗೇಶ್ ಪೂಜಾರಿ ನೈಬೆಲು,  ಸುರೇಶ್ ಶೆಟ್ಟಿ ಆರ್ ಕೆ ನಿವಾಸ ಮಧ್ವ, ದೀರಜ್ ಆಚಾರ್ಯ ಕಲ್ಲಡ್ಕ, ಪಿಲಾತಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ  ಹರ್ಷಿಣಿ ಪುಷ್ಪಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ  ರೂಪಕಲ ಮಧ್ವ, ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಮಂಡಲದ ಅಧ್ಯಕ್ಷ  ದಿನೇಶ್ ಶೆಟ್ಟಿ ದಂಬೆದಾರ್, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಓಂಕಾರ ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಯೋಗೀಶ್ ಪೂಜಾರಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ  ಸಾಧನೆಗೈದ ಸಾಧಕರಾದ ಸಾಯಿ ಸುಮಾ ಮಿಥುನ್ ರಾಜ್ ನಾವಡ, ಮೇಜರ್ ಡಾ| ಸುಧಾ ಚಂದ್ರಶೇಖರ್ ಶೆಟ್ಟಿ ಪುಳಿಮಜಲು,  ತಿಮ್ಮಪ್ಪ ಮದ್ವ, ಕುಮಾರಿ ಧನ್ಯ ಗೌಡ ಮಧ್ವ ರಾಜಮಾರ್ ಅವರನ್ನು  ಸನ್ಮಾನಿಸಲಾಯಿತು.

ಅರ್ಪಣಾ  ಸ್ವಾಗತಿಸಿ,  ಪ್ರಮೀತ್ ಪೂಜಾರಿ ವಂದಿಸಿದರು. ರಶ್ಮಿ ಸಂದೇಶ್ ರೈ, ಶ್ ಮೇಘಶ್ರೀ ಯಾದೇಶ್ ರೈ  ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಗೆ ಪಿಂಗಾರ ಕಲಾವಿದರು ಬೆದ್ರ ಇವರಿಂದ  ತುಳು ನಾಟಕ ಪ್ರದರ್ಶನಗೊಂಡಿತು 

 

By suddi9

Leave a Reply

Your email address will not be published. Required fields are marked *