ಬಂಟ್ವಾಳ: ಟಿ.ಎ .ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಷನ್ ಹಳೇ ವಿದ್ಯಾರ್ಥಿ ಸಂಘ ಮಣಿಪಾಲ ,ಟಿ ಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಷನ್, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿ. ಬೆಂಗಳೂರು, ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ.) ಬಿ ಸಿ ರೋಡ್ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇವರ ಸಹಕಾರದಲ್ಲಿ “ಶಕ್ತಿಪಥ” ಎಂಬ ಮಹಿಳಾ ಉದ್ಯಮಿಗಳ ಕಾರ್ಯಾಗಾರವು ಬಿ.ಸಿ.ರೋಡಿನ ರೋಟರಿ ಭವನ ನಡೆಯಿತು .

ಬಂಟ್ವಾಳ ರೋಟರಿಕ್ಲಬ್ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಅವರುಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಜೀವನೋಪಾಯ ಹಾಗೂ ಸಮುದಾಯ ಆಧಾರಿತ ಉದ್ಯಮಗಳನ್ನು ಬಲಪಡಿಸುವಲ್ಲಿ ತಳಮಟ್ಟದ ಸಂಸ್ಥೆಗಳು ಮತ್ತು ಮೂಲಸೌಕರ್ಯ, ಶಾಶ್ವತ ಆರ್ಥಿಕ ಚಟುವಟಿಕೆಗಳನ್ನು ಸಾಧ್ಯವಾಗಿಸಲು ಇಂತಹ ಕಾರ್ಯಾಗಾರ ಸಹಕಾರಿಯಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ನಾರಾಯಣ ಹೆಗಡೆ ಅವರು ಮಹಿಳಾ ಉದ್ಯಮಶೀಲತೆ ಮತ್ತು ನಾಯಕತ್ವದ ಕುರಿತು ವಿಷಯ ಮಂಡಿಸಿದರು.ಅತಿಥಿಯಾಗಿ ಭಾಗವಹಿಸಿದ್ದ ಬಿ.ಸಿ.ರೋಡಿನ ನ್ಯಾಯವಾದಿ ಶೈಲಜಾ ರಾಜೇಶ್ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಬದುಕುವುದೇ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ ಯವರು ಮಾತನಾಡಿ ಕಸಮುಕ್ತ ಪ್ರದೇಶವನ್ನಾಗಿಸುವತ್ತ ನಾವು ಮುಂದಡಿ ಇಡಬೇಕು ಸೋಲಾರ್ ಕ್ಷೇತ್ರದಲ್ಲಿ ಸೆಲ್ಕೋ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರಲ್ಲದೆ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರು ಕೈ ಜೋಡಿಸಬೇಕೆಂದರು.
ಟಿ ಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಷನ್ ಹಳೆ ವಿದ್ಯಾರ್ಥಿ ಸಂಘದ ಪ್ರೊಫೆಸರ್ ಶ್ರುತಿ ಮಯೂರ್ ಉಪಸ್ಥಿತರಿದ್ದರು.
ಸೆಲ್ಕೋ ಸಂಸ್ಥೆಯ ಉಪ ಮಹಾಪ್ರಬಂಧಕರಾದ ಗುರುಪ್ರಕಾಶ್ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು ಸಂಸ್ಥೆಯ ಸಿಬಂದಿಗಳು ಹಾಜರಿದ್ದರು
