ಬಂಟ್ವಾಳ:ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಳೆದ 6 ವರ್ಷಗಳಿಂದ  ರೈತರಿಗೆ ಬೇಕಾದ ಸಾಲ ಸೌಲಭ್ಯವನ್ನು ಯಾವುದೇ ತಾರತಮ್ಯವಿಲ್ಲದೆ ಅತೀ ಸುಲಭವಾಗಿ ನೀಡಲಾಗಿದ್ದಲ್ಲದೇ  ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹವನ್ನಿತ್ತು, ಎಲ್ಲಾ ಕ್ಷೇತ್ರಗಳಲ್ಲೂ ಸಿದ್ದಕಟ್ಟೆ ಸಹಕಾರ ಸಂಘವು ಗಣನೀಯವಾಗಿ ತೊಡಗಿಸಿ ಕೊಂಡಿರುವುದರ ಫಲವಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ರವರನ್ನು  ಮಾಧ್ಯಮ ಸಂಸ್ಥೆಯೊಂದು ಗುರುತಿಸಿ ಕರ್ನಾಟಕ ಸಹಕಾರ ಶಿರೋಮಣಿ 2025 ರಾಜ್ಯ ಮಟ್ಟದ ಪ್ರಶಸ್ತಿ ನೀಡಿರುವುದು ನಮ್ಮ ಸಂಘಕ್ಕೆ ಸಿಕ್ಕಿದ ಗೌರವವಾಗಿದೆ ಎಂದು ಸಿದ್ದಕಟ್ಟೆ ಪ್ರಾ. ಕೃ. ಪ.ಸ. ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೂಡುಂಬ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಸಂಘದ  ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ  ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭುರವವರಿಗೆ ಸಂಘದ ವತಿಯಿಂದ ಏರ್ಪಡಿಸಿದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ನಿರ್ದೇಶಕರಾದ ರಶ್ಮಿತ್ ಶೆಟ್ಟಿ ನೋಣಲ್ ಗುತ್ತು,ದಿನೇಶ್ ಪೂಜಾರಿ ಹುಲಿಮೇರು ಅಭಿನಂದನಾ ಭಾಷಣಗೈದರು.
ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ,ಚಂದ್ರಶೇಖರ ಶೆಟ್ಟಿ,ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ ಹೆಗ್ಡೆ,ಮಂದಾರತಿ ಶೆಟ್ಟಿ,ಪುಷ್ಪಲತಾ ಎಸ್. ಆರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು, ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ,ವಂದಿಸಿದರು.  

By suddi9

Leave a Reply

Your email address will not be published. Required fields are marked *