ಬಂಟ್ವಾಳ:ಶ್ರೀ ಕ್ಷ ತ್ರ ಪಾಣೆಮಂಗಳೂರು ಬಸದಿಯಲ್ಲಿ ಸೀಮೆಯ ಗುರುಗಳು ಮೂಡಬಿದ್ರೆ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಾಯಿತು.

ವಾಸ್ತು ತಜ್ಞ ಪಾದೂರು ಸುದರ್ಶನ ಇಂದ್ರ ಮತ್ತು ಹಚ್ಚಾಡಿ ಅಜಿತ್ ಕುಮಾರ್ ಇಂದ್ರ ಅವರ ನೇತೃತ್ವದಲ್ಲಿ ವಿಧಿ ವಿಧಾನದೊಂದಿಗೆ ಶಿಲಾನ್ಯಾಸ ನಡೆಸಲಾಯಿತು.
ಏಕಶಿಲಾ ಮಾನಸ್ತಂಭದ ದಾನಿಗಳಾದ ಶಶಿಕಲಾ ಮತ್ತು ಸಂಪತ್ ಕುಮಾರ್ ಮತ್ತು ಮಕ್ಕಳು, ಕುಟುಂಬಸ್ಥರು ಬೆಂಗಳೂರು,
ಚತುರ್ಮುಖ ಬಿಂಬದ ದಾನಿಗಳಾದ ಭಾರತಿ ಮತ್ತು ಶತ್ರುಂಜಯ ಶೆಟ್ಟಿ ಹಾಗೂ ಮಕ್ಕಳು, ಅತ್ತಾವರ ಮಂಗಳೂರು,
ಮಾನಸ್ತಂಭದ ಸುತ್ತಲಿನ ಹಾಸು ಕಲ್ಲಿನ ದಾನಿಗಳಾದ ರಶ್ಮಿತಾ ಮತ್ತು ಯುವರಾಜ್ ಜೈನ್ ಹಾಗೂ ಮಕ್ಕಳು ಮೂಡುಬಿದಿರೆ,
ಧನಶ್ರೀ ಮತ್ತು ಉದಯ ಕುಮಾರ್ ಹಾಗೂ ಮಕ್ಕಳು ಮಳಲಿ, ಮುಂಭಾಗದ ಮೆಟ್ಟಿಲುಗಳ ದಾನಿಗಳಾದ ನಗ್ರಿ ಕುಟುಂಬಸ್ಥರ ಪರವಾಗಿ ಧನ್ಯ ಕುಮಾರ್, ಸಂಕಪ್ಪ ಶೆಟ್ಟಿ ಹಾಗೂ ಜೀವೇಂದ್ರ ಬಲ್ಲಾಳ್ ಮತ್ತು ಕುಟುಂಬಸ್ಥರು, ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು.
ಪಾಣೇರು ಬಸದಿಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಹೊಸಂಗಡಿ ಅರಮನೆ ಅವರು ಸ್ವಾಗತಿಸಿದರು.ಧರಣೇಂದ್ರ ಇಂದ್ರರು ಪ್ರಸ್ತಾವನೆಗೈದರು. ಸನ್ಮತಿ ಜಯಕೀರ್ತಿ ಪ್ರಾರ್ಇಸಿದರು, ಜಯಕೀರ್ತಿ ಜೈನ್ ವಂದಿಸಿದರು. ಹರ್ಷರಾಜ ಕಾರ್ಯಕ್ರಮ ನಿರೂಪಿಸಿದರು.ಫೆ.20ರಂದು ಮಾನಸ್ತಂಭ ಸ್ಥಾಪನಾ ಪೂಜಾ ಕಾರ್ಯಕ್ರಮ ನಡೆಯಲಿದೆ.
