ಬಂಟ್ವಾಳ: ಅಸಹಾಯಕ ಅಂಚಿಗೆ ತಳ್ಳಲ್ಪಟ್ಟಿರುವ ಬುಡಕಟ್ಟು ಸಮುದಾಯ( ಕೊರಗ ಸಮುದಾಯ) ಬಂಟ್ವಾಳ ತಾಲೂಕಿನಲ್ಲಿ ಕೆಲವೇ ಕೆಲವು ಕುಟುಂಬಗಳಿದ್ದು, ಅವರೀಗ ಬೀದಿಗೆ ಬಂದು ನಮಗೂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರುಗೊಳಿಸಿ ಹಾಗೆಯೇ ನಮ್ಮ ಪ್ರತಿ ಕುಟುಂಬಕ್ಕು ಎರಡೂವರೆ ಎಕ್ರೆ ಭೂಮಿ ಕೊಡಿ
ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗ ಅನಿರ್ಧಿಷ್ಠಾವಧಿಯವರೆಗೆ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಂಗಳವಾರ ಆರಂಭಿಸಿದ್ದಾರೆ.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಈ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು,ಕೊರಗರ ಸಾಂಪ್ರದಾಯಿಕ ಡೋಲು ಬಾರಸುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಕರ್ನಾಟಕ – ಕೇರಳ ರಾಜ್ಯದ ಅಧ್ಯಕ್ಷೆ ಸುಶೀಲಾ ನಾಡ ಅವರು ಈ ಸಂದರ್ಭ ಮಾತನಾಡಿ, ಸರಕಾರದ ಎಲ್ಲಾ ಯೋಜನೆಗಳು ಭೂಮಿ ಆಧಾರಿತವಾಗಿದ್ದು, ಭೂಮಿಯಿಂದ ವಂಚಿತರಾಗಿರುವ ಕೊರಗ ಕುಟುಂಬಗಳ ಅಭಿವೃದ್ಧಿಗೆ ಹಿನ್ನಡೆಯಾಗಿದ್ದಲ್ಲದೆ, ಯಾವುದೇ ಯೋಜನೆಗಳನ್ನು ಪಡೆಯಲು ಅಸಾಧ್ಯವಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಕೊರಗ ಕುಟುಂಬಗಳು ವಾಸ್ತವ್ಯವಿರುವ ಮನೆಗಳಿಗೆ ಈವರೆಗೂ ಹಕ್ಕು ಪತ್ರ ದೊರೆತಿಲ್ಲ, ಈ ಬಗ್ಗೆ ಸರಕಾರ,ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿಯನ್ನು ಸಲ್ಲಿಸ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.
1994 ರಲ್ಲಿ ಕೊರಗ ಸಮುದಾಯದ ವಿಶೇಷ ಅಧ್ಯಯನ ನಡೆಸಿರುವ ಡಾ.ಮಹಮ್ಮದ್ ಪೀರ್ ಅವರ ವರದಿಯಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗೆ ಎರಡುವರೆ ಎಕರೆ ಕೃಷಿ ಭೂಮಿಯನ್ನು ನೀಡಿ, ಅವರನ್ನು ಮಾದರಿ ಕೃಷಿಕರಾಗುವಂತೆ ಪುನರ್ ವಸತಿ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಮಾಡಿರುವ ಶಿಫಾರಿಸಿನ ಬಗ್ಗೆಯು ಸರಕಾರ ಗಣನೆಗೆ ತೆಗೆದುಕೊಂಡು ಈವರೆಗೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆರೋಪಿಸಿದರು.
ಸಮುದಾಯಕ್ಕೆ ಯಾವುದೇ ರೀತಿಯ ಜೀವನ ಭದ್ರತೆ ಸಿಗದಿದ್ದು, ಭೂಮಿಯ ಹಕ್ಕಿನಿಂದ ವಂಚಿತರಾದ ಕೊರಗ ಕುಟುಂಬಗಳು ಸರಕಾರದ ಯೋಜನೆ,ಸವಲತ್ತು ಪಡೆಯುವಲ್ಲಿಯು ವಂಚಿತರಾಗಿವೆ ಎಂದು ಹೇಳಿದರು.
2014 ರಲ್ಲಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ 11 ಸೆಂಟ್ಸ್ ಜಾಗವನ್ನು ಕಾದಿರಿಸಿದೆಯಾದರೂ ಅದಿನ್ನು ಆರ್.ಟಿ.ಸಿ. ಯಾಗಿ ಮಂಜೂರಾತಿಯಾಗಿಲ್ಲ,ಸಮುದಾಯ ಭವನದ ನಿರ್ಮಾಣ ನಮ್ಮ ಹಲವು ಸಮಯದ ಕನಸಾಗಿದ್ದು, ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಅದಿನ್ನು ನನಸಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನವೀನ್ ,ಜಿಲ್ಲಾ ಸಂಯೋಜಕ ಕೆ.ಪುತ್ರನ್, ತಾಲೂಕು ಅಧ್ಯಕ್ಷ ರಮೇಶ್, ಮಹಿಳಾ ಅಧ್ಯಕ್ಷೆ ಲಲಿತಾ ,ಮಾಜಿ ಕಾರ್ಯದರ್ಶಿ ಶೀನ, ಪುತ್ತೂರು ಸಂಘದ ಪದಾಧಿಕಾರಿಗಳಾದ ಉಕ್ರಪ್ಪ,ಪವಿತ್ರಾ, ಬಾಬು,ಲಲಿತಾ ,ಕಿನ್ನಿಗೋಳಿ ಸಂಘದ ಅಧಗಯಕಗಷೆ ಸುಪ್ರಿಯಾ

ಹಾಗೂ ಸದಸ್ಯರುಗಳು ಹಾಜರಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಭೂರಹಿತ 18 ಕುಟುಂಬ ಸಾಮೂಹಿಕವಾಗಿ ತಹಶೀಲ್ದಾರರಿಗೆ ದರ್ಖಾಸು ಅರ್ಜಿ ಸಲ್ಲಿಸಿದ್ದು, ಎರಡು ವರ್ಷಗಳಾದರೂ ಒಂದೇ ಒಂದು ಕುಟುಂಬಕ್ಕೆ ಹಕ್ಕಪತ್ರ ನೀಡಲು ಕ್ರಮ ಕೈಗೊಂಡಿಲ್ಲ ಎಂದು ಧರಣಿ ನಿರತ ಸಮುದಾಯದ ಪ್ರಮುಖರು ತಿಳಿಸಿದ್ದಾರೆ.ಸಮುದಾಯ ಭವನಕ್ಕೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನ ಬಳಿಯಲ್ಲಿ 11 ಎಕ್ರೆ ಜಮೀನು ಕಾದಿರಿಸಲಾಗಿದ್ದರೂ ಈ ಜಮೀನನ್ನು ಐ.ಟಿ.ಡಿ.ಪಿ.ಇಲಾಖೆ ಹೆಸರಿಗೆ ಆರ್ ಟಿಸಿ ಮಂಜೂರಾತಿಯಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳ ಇದೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿದ್ದರುಹಾಗೆಯೇ ಕೊರಗ ಸಮುದಾಯದ ಕುಂದುಕೊರತೆ ಸಭೆಯಲ್ಲು ಸಮುದಾಯದ ಮುಖಂಡರು ಪ್ರಸ್ತಾಪಿಸಿದ್ದರು.ಅದೇರೀತಿ ಇತ್ತೀಚೆಗೆ ತಾಲೂಕಿಗಾಗಮಿಸಿದ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೂ ಮನವಿ ಸಲ್ಲಿಸಿದ್ದರು.