ಬಂಟ್ವಾಳ: ಸ್ವಸ್ತಿಕ್ ಜೈನ ಯುವಜನ ಸಂಘ (ರಿ), ಸಿದ್ದಕಟ್ಟೆ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೋಮವಾರ ಸಿದ್ದಕಟ್ಟೆ ಸ್ವಸ್ತಿಕ್ ಸಭಾ ಭವನದಲ್ಲಿ ನಡೆಯಿತು.ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಎ. ಜಯಕುಮಾರ್ ಶೆಟ್ಟಿ ಯವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನಗೈದು ಶುಭ ಹಾರೈಸಿದರು.
ಸಂಘದ ನೂತನ ಅಧ್ಯಕ್ಷರಾದ ವೀರೇಂದ್ರ ಎಂ ಸಿದ್ದಕಟ್ಟೆ, ಪ್ರದಾನ ಕಾರ್ಯದರ್ಶಿ ಶುಶಾಂತ್, ಕೋಶಾಧಿಕಾರಿ ಪ್ರಾಣೇಶ್ ಕುಮಾರ್,ಉಪಾಧ್ಯಕ್ಷರುಗಳಾದ ಅವನ್, ಸಚಿನ್ ಹೆಗ್ಡೆ, ವಿವೇಕ್ ರಾಜ್, ಪ್ರಜೋತ್, ಜೊತೆ ಕಾರ್ಯದರ್ಶಿ ಅಕರ್ಷ್ ಜೈನ್, ಸಂಸ್ಕೃತಿಕ ಕಾರ್ಯದರ್ಶಿ ಸುಮನ್ ಜೈನ್, ಕ್ರೀಡಾ ಕಾರ್ಯದರ್ಶಿ ಯಾಗಿ ಮನೀಷ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಗೌರವ ಸಲಹೆಗಾರರಾದ ವಿನಯಚಂದ್ರ ಜೈನ್, ಡಾ| ಸುದೀಪ್, ಮದ್ವರಾಜ್ ಜೈನ್, ಪಾಂಡಿರಾಜ್ ಜೈನ್, ಅಶೋಕ್ ಜೈನ್, ಸುಜನ್ ಜೈನ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಅನಂತಪದ್ಮ ಮಹಿಳಾ ಸಂಘದ ಅಧ್ಯಕ್ಷರಾದ ಪ್ರೇಮ,ಹಿರಿಯರಾದ ಅರ್ಕಕೀರ್ತಿ ಇಂದ್ರ, ಜಯರಾಜ್ ಪುತ್ತಿಲ ರವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳನ್ನು ನಿಯೋಜಿತ ಅಧ್ಯಕ್ಷರಾದ ವೀರೇಂದ್ರ ಎಂ ಸಿದ್ದಕಟ್ಟೆಯವರು ಸ್ವಾಗತಿಸಿದರು. ಆಕರ್ಷ್ ಜೈನ್ ವಂದಿಸಿದರು. ಸುಜನ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು
