ಬಂಟ್ವಾಳ: ಮಹಾನ್ ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 164ನೇ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜ.11ರಂದು ಸೋಮವಾರ ಆಚರಿಸಲಾಯಿತು.

ಇದರ ಅಂಗವಾಗಿ ಸ್ಥಳೀಯ ಸಂಘ ಸಂಸ್ಥೆ, ಸಾರ್ವಜನಿಕರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಾಮಕೃಷ್ಣ ತಪೋವನದಿಂದ ಅಡ್ಡೂರಿನ ವರೆಗೆ ಮೆರವಣಿಗೆ ಸಾಗಿ ವಾಪಾಸ್ ಅಗಮಿಸಿ ತಪೋವನದಲ್ಲಿ ಸಂಪನ್ನಗೊಂಡಿತು.
ನಂತರ ತಪೋವನದಲ್ಲಿ ಮಕ್ಕಳಿಗೆ ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆ ನೇರವೇರಿತು.ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಅನ್ನಪ್ರಸಾದ ನಡೆಯಿತು.ಸ್ವಾಮಿ ವಿವೇಕಚೈತನ್ಯಾನಂದ ಅವರ ನೇತೃತ್ವದಲ್ಲಿ ನಡೆಯಿತು.
