ಮೂಡುಬಿದರೆ: ವಿದ್ಯಾಗಿರಿಯ ಮೊಬೈಲ್ ಅಂಗಡಿಯಿಂದ ಶನಿವಾರ ರಾತ್ರಿ 6 ಮೊಬೈಲ್ಗಳನ್ನು ಕದ್ದ ಉತ್ತರ ಪ್ರದೇಶದ ಆರೋಪಿಯನ್ನು ಸೋಮವಾರ ಸ್ವರಾಜ್ಯ ಮೈದಾನ ಬಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೆಶದ ಕುಶಿನಗರ್ ಜಿಲ್ಲೆಯ ಕೊಯಲಸ್ವನ್ ಬುಜುಗರ್್ ಗ್ರಾಮದ ಸುನಿಲ್(21)ಎಂದು ತಿಳಿದುಬಂದಿದೆ. ಆರೋಪಿ ಶನಿವಾರ ರಾತ್ರಿ ವಿದ್ಯಾಗಿರಿಯ ಮೊಬೈಲ್ ಅಂಗಡಿಯ ಶಟರ್ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಸುಮಾರು 42 ಸಾವಿರ ಬೆಲೆಯ 6 ಮೊಬೈಲ್ಗಳನ್ನು ಕಳವು ಮಾಡಿದ್ದ.

kalla
ಈ ಬಗ್ಗೆ ಮೊಹಮ್ಮದ್ ಅಶ್ರಪ್ ನೀಡಿದ ದೂರಿನಂತೆ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸೋಮವಾರ ಬೆಳಿಗ್ಗೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಹಾಗೂ ಎಸ್.ಐ ರಮೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ ಸ್ವರಾಜ್ಯ ಮೈದಾನ ಬಳಿಯ ಉಪಖಜಾನೆ ಎದುರು ಅಪರಿಚಿತ ವ್ಯಕ್ತಿಯೊಬ್ಬ ಕಪ್ಪು ಬ್ಯಾಗ್ ಹಿಡಿದುಕೊಂಡು ನಿಂತಿದ್ದು ಪೊಲೀಸರನ್ನು ಕಂಡು ಓಡಲೆತ್ನಿಸಿದ. ಕೂಡಲೆ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಆತ ಕಳ್ಳತನ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆನ್ನಲಾಗಿದೆ. ಆತನಿಂದ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರಪ್ರದೇಶ ಮೂಲದ ಸುನಿಲ್ ಒಂದು ತಿಂಗಳಿನಿಂದ ಮೂಡುಬಿದರೆಯ ವಿವಿದೆಡೆ ನಿಮರ್ಾಣ ಹಂತದ ಕಟ್ಟಡಗಳಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ

By suddi9

Leave a Reply

Your email address will not be published. Required fields are marked *