ಬಂಟ್ವಾಳ : ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ಬೋಳಂತೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ
ಕೂಸಪ್ಪ ಮಾಸ್ಟರ್ ಪ್ರಭುಗಳ ಬೆಟ್ಟುಆಯ್ಕೆಯಾಗಿದ್ದಾರೆ.

ಬಿಲ್ಲವ ಸಂಘ (ರಿ.) ಕಲ್ಲಡ್ಕ ಇದರ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.ಚೆನ್ನಪ್ಪ ಪೂಜಾರಿ ಗುಂಡಿಮಜಲು
(ಉಪಾಧ್ಯಕ್ಷರು),ಗಣೇಶ್ ಪ್ರಸಾದ್ ಗಾಣದ ಬೆಟ್ಟು (ಪ್ರಧಾನ ಕಾರ್ಯದರ್ಶಿ),ಭಾಸ್ಕರ್ ಕೊಕ್ಕಪುಣಿ,ಕಿರಣ್ ಪ್ರಭುಗಳ ಬೆಟ್ಟು(ಜತೆ ಕಾರ್ಯದರ್ಶಿಗಳು), ಸಂಜೀವ ಪೂಜಾರಿ ಮಾಡದಡಿ(ಕೋಶಾಧಿಕಾರಿ),ಪ್ರಸಾದ್ ಗುಡ್ಡೆಮಾರ್, ಚಂದ್ರಶೇಖರ್ ಪೂಜಾರಿ ಮಾಡದಡಿ, ಅಕ್ಷಿತ್ ಕುಲ್ಯಾರ್( ಸಂಘಟನಾ ಕಾರ್ಯದರ್ಶಿಗಳು),ಸದಸ್ಯರುಗಳಾಗಿ ಧನಂಜಯ ಗುಂಡಿಮಜಲು, ಚಂದ್ರಶೇಖರ್, ರಜತ್, ಧರ್ಣಪ್ಪ ಪೂಜಾರಿ, ನವೀನ, ಶ್ರೀನಿವಾಸ ಹಾಗೂ
ಗೌರವ ಸಲಹೆಗಾರರಾಗಿ ಆನಂದ ಪೂಜಾರಿ ಪ್ರಭುಗಳ ಬೆಟ್ಟು, ನಾರಾಯಣ ಪೂಜಾರಿ ಉತ್ತಮ ನಗರ, ಕೃಷ್ಣಪ್ಪ ಪೂಜಾರಿ ಗುಂಡಿಮಜಲು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ , ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪದಾಧಿಕಾರಿಗಳಾದ ರಮೇಶ್ ಪೂಜಾರಿ ಹೊಸಕಟ್ಟ, ಕಿಶೋರ್ ಕಟ್ಟೆಮಾರ್ ಮೊದಲಾದವರು ಉಪಸ್ಥಿತರಿದ್ದರು.
