ಬಂಟ್ವಾಳ: ಕಿರಿಯ ವಯಸ್ಸಿನಲ್ಲೇ ಮಾನವೀಯ ಮೌಲ್ಯಗಳ ಜೊತೆ ಸೇವೆಯಲ್ಲೇ ಸಂತೃಪ್ತಿ ಕಾಣುವ ಸೇವಾಮನೋಭಾವದ ಬದುಕು ಎಲ್ಲರಿಗೂ ಪ್ರೇರಕ ಎಂದು ವಾಲ್ಟರ್ ನಂದಳಿಕೆ ಹೇಳಿದರು.


ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಅರ್ಜುನ್ ಭಂಡಾರ್ಕರ್ ಅವರು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿಬಂಟ್ವಾಳ ಸ್ವರ್ಣಸೌಧ ಸಭಾಂಗಣದಲ್ಲಿ ನಡೆದ  ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಉದ್ಯಮಿ ಭುವನೇಶ್ ಪಚಿನಡ್ಕ ಕಾರ್ಯಕ್ರಮವನ್ನು ಉದ್ಗಾಟಿಸಿ ಶುಭಹಾರೈಸಿದರು.
ಸ್ವರ್ಣೋದ್ಯಮಿ ನಾಗೇಂದ್ರ ಎ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಕಾಶ್ ಅಂಚನ್, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ,ಬಂಟ್ವಾಳ ಜಿ.ಎಸ್.ಬಿ ಸೇವಾ ಸಂಘದ ಅಧ್ಯಕ್ಷ ಎನ್. ಲಕ್ಷ್ಮೀನಾರಾಯಣ ಮಲ್ಯ, ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು, ಮಾಜಿ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಭಾಗ್ಯಶ್ರೀ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು.
ಇದೇ ವೇಳೆ 4 ಅಶಕ್ತ ಕುಟುಂಬಗಳಿಗೆ ಸಹಾಯಧನ ಹಾಗೂ ಸರಕಾರಿ ವಸತಿ ಶಾಲೆಗೆ  ಕಂಪ್ಯೂಟರ್ ವಿತರಿಸಲಾಯಿತು. ಗಿರೀಶ್ ಪೈ ಸ್ವಾಗತಿಸಿ, ಸಚಿನ್ ಸುವರ್ಣ ಪ್ರಾಸ್ತಾವನೆಗೈದು,
ಕುಸುಮಾಕರ್ ಕುಂಪಲ ಅಭಿನಂದನಾ ಪತ್ರವನ್ನು ವಾಚಿಸಿದರು. ಅಜಿತ್ ಕುಮಾರ್ ವಂದಿಸಿದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *