ಬಂಟ್ವಾಳ: ವಕೀಲರ ಸಂಘ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ವಕೀಲರ ದಿನಾಚರಣೆ ಮತ್ತು ವರ್ಗಾವಣೆಯಾದ ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭ ಬಂಟ್ವಾಳ ಬಾರ್ ಅಸೋಸಿಯೇಷನ್ ನಲ್ಲಿ ನಡೆಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಭಡ್ತಿ ಪಡೆದು ಮಂಡ್ಯಕ್ಕೆ  ವರ್ಗಾವಣೆಗೊಂಡ ಬಂಟ್ವಾಳ ಪ್ರಧಾನ ಸಿವಿಲ್  ಮತ್ತು ಜೆ.ಎಮ್.ಎಫ್.ಸಿ.ಯ ನ್ಯಾಯಾಧೀಶರಾದ  ಕೃಷ್ಣ ಮೂರ್ತಿ ಅವರನ್ನು ಈ ಸಂದರ್ಭ ಸನ್ಮಾನಿಸಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಹಿರಿಯ ಸಿವಿಲ್  ಜೆ.ಎಮ್.ಎಫ್.ಸಿ.ಯ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ.ಅವರು ಮಾತನಾಡಿ,ವಕೀಲ ವೃತ್ತಿ ಅತ್ಯಂತ ಮಹತ್ವದ್ದಾಗಿದ್ದು,ಬಂಟ್ವಾಳ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣಮೂರ್ತಿ ಅವರಿಂದ ವೃತ್ತಿಗೆ ಸಂಬಂಧಿಸಿ ಸಾಕಷ್ಟುವಿಚಾರ, ಉತ್ತಮಸಲಹೆ, ಮಾರ್ಗದರ್ಶನವನ್ನು ಪಡೆದುಕೊಂಡಿದ್ದೆನೆ ಎಂದು ಹೇಳಿದರು.


ಬಂಟ್ವಾಳ ಹೆಚ್ಚುವರಿ ಸಿವಿಲ್  ಮತ್ತು ಜೆ.ಎಮ್.ಎಫ್ .ಸಿ.ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಂದ್ರ ಕೆ.ಎಸ್.ಅವರು ಮಾತನಾಡಿ ಶುಭ ಹಾರೈಸಿದರು.


ಮಂಗಳೂರಿಗೆ ವಿಶೇಷ ಸ್ಥಾನಮಾನ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಧಾನ ಸಿವಿಲ್  ಮತ್ತು ಜೆ.ಎಮ್.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ ಮೂರ್ತಿ ಅವರು ಮಂಗಳೂರು ಅದರದ್ದೇ ಆದ  ವಿಶೇಷ ಸ್ಥಾನಮಾನ ಹೊಂದಿದೆ. ಇಂತಹ ಬುದ್ದಿವಂತರ ಜಿಲ್ಲೆಯಲ್ಲಿ ಸ್ಥಳದಲ್ಲಿ  ನನ್ನ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಲ್ಲೆ ಎಂಬ ಯೋಚನೆ ನನ್ನನ್ನು ಕಾಡಿತ್ತು. ಆದರೆ  ಬಂಟ್ವಾಳ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅನೇಕ ಉತ್ತಮವಾದ ವಿಚಾರ ಮತ್ತು ಸಂಗತಿಗಳನ್ನು ಕಲಿತುಕೊಂಡಿದ್ದೇನೆ ಎಂದು ಬಂಟ್ವಾಳದಲ್ಲಿ ವೃತ್ತಿ ಜೀವನದ ಮೂರುವರೆ ವರ್ಷ ಕಳೆದುಹೋದ ದಿನಗಳು ಗೊತ್ತಾಗಿಲ್ಲ, ಅಂತಹ ವಾತಾವರಣ ಬಂಟ್ವಾಳದಲ್ಲಿತ್ತು ಎಂದು ಹೇಳಿದ ಅವರು ಯಾವುದೇ ವೃತ್ತಿಯಲ್ಲಿ ಎಡವಿದಾಗ ಅದನ್ನು ತಿದ್ದಿಕೊಂಡು ಹೋಗುವ ಮನಸ್ಸಿದ್ದಾಗ ಯಶಸ್ಸು ಕಾಣಲು ಸಾಧ್ಯ ಎಂದು ಅವರು ತಿಳಿಸಿದರು.


ವಕೀಲರ ಸಂಘದ ಜಿಲ್ಲಾ  ಅಧ್ಯಕ್ಷ ಮತ್ತು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಚ  ರಿಚರ್ಡ್ ಕೊಸ್ತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ನ್ಯಾಯಾಧೀಶರಾದ ಕೃಷ್ಣಮೂರ್ತಿ ಅವರ ತಾಳ್ಮೆ ಮತ್ತು ಒಳ್ಳೆಯ ಗುಣಗಳು ಬಂಟ್ವಾಳದ ವಕೀಲರಿಗೆ ಮಾದರಿಯಾಗಿದೆ ಎಂದು ಹೇಳಿದರು.


  ವಕೀಲರ ದಿನಾಚರಣೆಯ ಕುರಿತು ಹಿರಿಯ ವಕೀಲರಾದ ಶ್ರೀನಿವಾಸ ದೈಪಲ ಅವರು ಮಾತನಾಡಿ ವಕೀಲರಿಗೆ ಪ್ರಾಮಾಣಿಕತೆ ಮತ್ತು ನಿಷ್ಠೆ ವೃತ್ತಿ ಜೀವನದಲ್ಲಿರುಬೇಕು ಎಂದು ಹೇಳಿದರು.

ಹಿರಿಯ ವಕೀಲರಾದ ಈಶ್ವರ ಉಪಾಧ್ಯಾಯ, ನಾರಾಯಣ ಭಟ್,ರಮಾನಂದ ಕಾರಂದೂರು ಮತ್ತಿತರರು ವೇದಿಕೆಯಲ್ಲಿದ್ದರು.ನ್ಯಾಯವಾದಿ ವೀರೇಂದ್ರ ಎಂ.ಸಿದ್ದಕಟ್ಟೆ ಸ್ವಾಗತಿಸಿದರು, ಸಂಘದ  ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ ವಂದಿಸಿದರು.ಪ್ರಧಾನ ಕಾರ್ಯದರ್ಶಿ ಕೆ.ನರೇಂದ್ರನಾಥ ಭಂಡಾರಿ ಕಾರ್ಯಕ್ರಮ  ನಿರೂಪಿಸಿದರು

By Suddi9

Leave a Reply

Your email address will not be published. Required fields are marked *