ಬಂಟ್ವಾಳ : ತಾಲೂಕಿನ ವಾಮದಪದವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ  ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯು   ಸಂಘದ ‘ಧಾರಿಣಿ’  ಸಭಾಂಗಣದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ  ಸಂಜೀವ ಪೂಜಾರಿ ಇವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು ೬೩೯೮.೨೨ ಕೋಟಿ ವ್ಯವಹಾರ ನಡೆಸಿ,೭೪.೨೭ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.


ಈ ಸಂದರ್ಭ ಸಂಘದ ಸದಸ್ಯರಿಗೆ ಶೇ. ೧೦ ಡಿವಿಡೆಂಡ್  ಘೋಷಿಸಿದ ಅವರು  ೩೨೧.೭೬ ರೂ.ಪಾಲುಬಂಡವಾಳ, ೨೯೦೬.೯೬ ರೂ.ಠೇವಣಾತಿ,೨೧೦೯.೪೭ ಕೇಂದ್ರ ಬ್ಯಾಂಕಿನ ಸಾಲ ಹೊಂದಿದೆ.ಸಂಘದಲ್ಲಿ ೧೮೮ ಸ್ವಸಹಾಯ ಗುಂಪುಗಳಿದ್ದು, ಶೇ. ೯೬.೪೫ಸಾಲ ವಸೂಲಾತಿ ಮಾಡಲಾಗಿದೆ.  ಆಡಿಟ್ ನಲ್ಲು ‘ಎ’ ವರ್ಗೀಕರಣ ಪಡೆದಿದೆ ಎಂದರು.


ಇದೇ ವೇಳೆ ಸಂಘದ ಗುಮಾಸ್ತನಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ  ಶೇಖರ್ ಶೆಟ್ಟಿಯವರನ್ನು  ಸನ್ಮಾನಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಗೆ  ಒಳಪಟ್ಟ  ರೈತ ಸದಸ್ಯರ ಮಕ್ಕಳಿಗೆ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ  ಮತ್ತು ಪಿ ಯು ಸಿ ಯಲ್ಲಿ  ೯೫%ಗಿಂತ ಹೆಚ್ಚು  ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತಲ್ಲದೆ ಶೇ. ೮೦ ಅಂಕ  ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ರೈತರ ಕ್ಷೇಮಾಭಿವೃದ್ದಿಗೆ ಸಹಾಯಧನ, ವಿಕಲ ಚೇತನ ಮಕ್ಕಳಿಗೆ ಫ್ರೋತ್ಸಾಹಧನ, ಸಂಘದ ಮರಣ ಹೊಂದಿದ ಸದಸ್ಯರಿಗೆ ಮರಣ ನಿಧಿಯನ್ನು ವಿತರಿಸಲಾಯಿತು.
ಸಂಘದ ೨ ನವೋದಯ ಸ್ವಸಹಾಯ ಗುಂಪುಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.  ಕು.ಅನರ್ಘ್ಯ ಪ್ರಾರ್ಥಿಸಿದರು. ಸಂಘದ ನಿರ್ಧೇಶಕರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿಯಾದ  ಆಲ್ಬರ್ಟ್ ಸಿ. ಡಿ’ಸೋಜ ಅವರು ಗತವರ್ಷದ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷರಾದ  ದಿನೇಶ್ ಶೆಟ್ಟಿ ನಿರ್ದೇಶಕರುಗಳಾದ ಕಮಲ್ ಶೆಟ್ಟಿ, ನಾಗರಾಜ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಉಮೇಶ ಶೆಟ್ಟಿ, ರಾಜೇಶ್ ಎನ್ , ವಾಸು , ವಸಂತಿ, ಶಶಿಪ್ರಭಾ ಹಾಗೂ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ  ಕೀರ್ತಿರಾಜ್  ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಯತೀಶ್.ಯಂ.ಶೆಟ್ಟಿ ವಂದಿಸಿದರು.

ಮಾಹಿತಿ ಶಿಬಿರ :
ಬಳಿಕ ಕ್ಯಾಂಪ್ಕೋ ಕೃಷಿ ಅಧಿಕಾರಿಯಾದ  ಕೃಷ್ಣ ಇವರಿಂದ ಕ್ಯಾಂಪ್ಕೋ ಗೊಬ್ಬರದ ಬಗ್ಗೆ, ವಿಶ್ರುತ್ ಅಗ್ರೋ ಇಂಡಸ್ಟಿ್ರೀಸ್ ಇವರಿಂದ ಮೀನಿನ ಮೂಲವನ್ನು ಹೊಂದಿರುವ ಗೊಬ್ಬರದ ಬಗ್ಗೆ ,ಕಂಪಾನಿಯೋ ಲೈಫ್ ಕೇರ್ ವೆಲ್ಕೆಸ್ ಸೆಂಟರ್  ಉಚಿತ ಫೂಟ್ ಪಲ್ಸ್ ಥೆರಪಿಯ ಬಗ್ಗೆ ಹಾಗೂ
 ಮ್ಯಾಕ್ಸ್ ಭೂಪ ಹೆಲ್ತ್ ಇನ್ಸುರೆನ್ಸ್ ಬಗ್ಗೆ ಮಾಹಿತಿ ನೀಡಲಾಯಿತು

By suddi9

Leave a Reply

Your email address will not be published. Required fields are marked *