ಗೋಳ್ತಮಜಲು : ಹನೀಫ್ ಹಾಜಿ ಪುನರಾಯ್ಕೆ
ಬಂಟ್ವಾಳ : ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಪುನರಾಯ್ಕೆ ಗೊಂಡಿದ್ದಾರೆ.ಅನ್ವರುಲ್ ಉಲೂಂ ಮದರಸದಲ್ಲಿ ಈಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್, ಹಾಜಿ ಜಿ.ಮಹಮ್ಮದ್ ಯೂಸುಫ್, ಕಾರ್ಯದರ್ಶಿಯಾಗಿ ಮುಹಮ್ಮದ್ ಆಸಿಫ್, ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಅಲಿ, ಅಬ್ದುಲ್ ಹಮೀದ್ ಎರ್ಮೆಮಜಲು, ಕೋಶಾಧಿಕಾರಿ ಯಾಗಿ ಇಕ್ಬಾಲ್ ಸಿ.ಎಂ. ಆಯ್ಕೆಯಾದರು.
ಜಿ.ಎ.ಮುಹಮ್ಮದ್ ಸಹೀದ್, ಅಬ್ದುಲ್ ರಹಿಮಾನ್ ಪನಾಮ, ಕುಂಞಿಮೋನು ಮೇಸ್ತ್ರಿ, ಸಂಶುದ್ದೀನ್ ಕ್ಲಾಸಿಕ್, ಹಂಝ ಮದಕ, ಇರ್ಶಾದ್ ಮದಕ, ಬಶೀರ್ ಬರೆ, ಅಶ್ರಫ್, ಅಬ್ದುಲ್ ರಹಿಮಾನ್ ಡ್ರೈವರ್, ಸುಲೈಮಾನ್, ಅದ್ದಮ, ಇಸಾಕ್, ರಫೀಕ್ ಎಸ್.ಆರ್., ಹಾಗೂ ಯೂನುಸ್ ಗೋಳ್ತಮಜಲು ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಸ್ಥಳೀಯ ಖತೀಬ್ ಮುನವ್ವರ್ ಬಾಖವಿ ದು:ಹಾ ನೆರವೇರಿಸಿದರು. ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೋಡಿ ಅಧ್ಯಕ್ಷತೆ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕ್ಕರ್ ಸಿದ್ದೀಕ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು



