ಬಂಟ್ವಾಳ: ಇಲ್ಲಿನ  ಪುರಸಭೆಯ ವತಿಯಿಂದ  ಪೌರಕಾರ್ಮಿಕರ ದಿನಾಚರಣೆ-2025‌ ಕಾರ್ಯಕ್ರಮವು ಪುರಸಭೆಯ ವಠಾರದಲ್ಲಿ  ಮಂಗಳವಾರ ನಡೆಯಿತು.ಪುರಸಭಾ ಅಧ್ಯಕ್ಷ  ಬಿ.ವಾಸು ಪೂಜಾರಿ ಲೊರೆಟ್ಟೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳಂತೆ ಪ್ರತಿನಿತ್ಯ ಬೆಳಗ್ಗಿನ ಹೊತ್ತು ಪುರಸಭಾ ವ್ಯಾಪ್ತಿಯಲ್ಲಿ ನಡೆಸುವ ಸೇವೆಯು ಶ್ಲಾಘನೀಯವಾಗಿದೆ.ನಾಗರಿಕರು ಕೂಡ ಪೌರಕಾರ್ಮಿಕರೊಂದಿಗೆ ಕೈ ಜೋಡಿಸಬೇಕು ಎಂದರು.


ಈ ಸಂದರ್ಭ ಎಸ್ ವಿ ಎಸ್ ದೇವಳ ಶಾಲಾ ಕ್ರೀಡಾಂಗಣದಲ್ಲಿ  ಪೌರಕಾರ್ಮಿಕರಿಗೆ ಆಯೋಜಿಸಲಾದ  ಕ್ರೀಡಾಕೂಟದ  ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅದೇರೀತಿ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆ ಸಮವಸ್ತ್ರವನ್ನು  ವಿತರಿಸಲಾಯಿತು.


ಪುರಸಭಾ ಸದಸ್ಯರಾದ ಪುರುಷೋತ್ತಮ, ಅಬುಬಕ್ಕರ್ ಸಿದ್ದಿಕ್, ಮಹಮ್ಮದ್ ಶರೀಫ್ , ರಾಮಕೃಷ್ಣ ಆಳ್ವ, ಶಶಿಕಲಾ,ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್ ಅವರು ಅಗಮಿಸಿ  ಶುಭ ಹಾರೈಸಿದರು.
ಪ್ರಭಾರ ಮುಖ್ಯಾಧಿಕಾರಿ ಮತ್ತಡಿ,ಆರೋಗ್ಯ ನಿರೀಕ್ಷಕ ರತ್ನಪ್ರಸಾದ್,ವ್ಯವಸ್ಥಾಪಕ ರಜಾಕ್ ,ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸಮುದಾಯ ಸಂಘಟಕಿ ಉಮಾವತಿ ಸ್ವಾಗತಿಸಿ,ವಂದಿಸಿದರು.ಪ್ರತಿನಿತ್ಯ ಬೀದಿಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗುವ ಪೌರಕಾರ್ಮಿಕರು ಮಂಗಳವಾರ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟ ಸಹಿತ ವಿವಿಧ ಕಾರ್ಯಕ್ತಮಗಳಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಸಂಭ್ರಮಿಸಿದರು

By suddi9

Leave a Reply

Your email address will not be published. Required fields are marked *