ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ 9 ದಿನಗಳ ನವರಾತ್ರಿ ಉತ್ಸವಕ್ಕೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಇದೇ ವೇಳೆ ದೇವರಿಗೆ ‘ಪ್ರಭಾವಳಿ’ ಸಮರ್ಪಿಸಲಾಯಿತು.

ಸಂಜೆ ನೃತ್ಯ ಭಜನೆ ಸಹಿತ ನವರಾತ್ರಿ ಪೂಜೆ, ರಾತ್ರಿ ರಂಗ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಶಿಲ್ಪಿ ಯಶೋಧರ ಪೆರಿಂಜೆ, ಪುರಸಭೆ ನಾಮನಿರ್ದೇಶನ ಸದಸ್ಯ ಜಗದೀಶ ಕುಂದರ್, ಪ್ರಮುಖರಾದ ಕೆ.ಬಾಬು ಸಪಲ್ಯ ವಗ್ಗ, ಮೋಹನ್ ಕೆ.ಶ್ರೀಯಾನ್ ರಾಯಿ, ಭಜನಾ ಮಂಡಳಿ ಅಧ್ಯಕ್ಷ ಕೀರ್ತನ್ ಪೂಜಾರಿ, ಗೌರವಾಧ್ಯಕ್ಷ ಜಯ ಪೂಜಾರಿ, ಹರೀಶ ಪಿಲಿಂಗಾಲು ಮತ್ತಿತರರು ಇದ್ದರು. 

By suddi9

Leave a Reply

Your email address will not be published. Required fields are marked *