ಕೈಕಂಬ : ಭಾರತ ರ‍್ಕಾರ ಮತ್ತು ರಾಜ್ಯ ರ‍್ಕಾರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ತಿಳಿದುಕೊಂಡಿದೆ. ಸಂಸ್ಥೆಗೆ ರ‍್ಕಾರಗಳಿಂದ ಸೂಕ್ತ ಉತ್ತೇಜನ ಸಿಗುತ್ತಿದೆ. ವಿಪತ್ತು ಸಂರ‍್ಭಗಳಲ್ಲಿ ಸಂಸ್ಥೆಯ ಸ್ವಯಂ ಸೇವಕರು ದೇಶದಲ್ಲಿ ಅರೆ ಸೈನಿಕರಂತೆ ಕೆಲಸ ನರ‍್ವಹಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣ ತಂಡ ರಚಿಸುವಂತೆ ರ‍್ಕಾರಕ್ಕೆ ಕೇಳಿಕೊಂಡಿದ್ದೇವೆ ಎಂದು ರಾಜ್ಯದ ಭಾರತ್ ಸ್ಕೌಟ್ಸ್ & ಗೈಡ್ಸ್ನ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಹೇಳಿದರು.

ಮೂಡುಶೆಡ್ಡೆ ಪಿಲಿಕುಳದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ದ.ಕ ಮತ್ತು ಕೊಡಗು ಜಿಲ್ಲೆಯ ರೋರ‍್ಸ್ ಮತ್ತು ರೇಂರ‍್ಸ್ಗಳಿಗಾಗಿ `ಯುವ ಆಪದ್ ಮಿತ್ರ’ ಯೋಜನೆಯಡಿ ಆಯೋಜಿಸಲಾದ ವಿಪತ್ತು ನರ‍್ವಹಣೆ ತರಬೇತಿ ಕರ‍್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಊರುಗಳಲ್ಲಿ ಸಂಭವಿಸಬಹುದಾದ ವಿಪತ್ತು ಸಂರ‍್ಭದಲ್ಲಿ ನೀವು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು. ಅದಕ್ಕಾಗಿ ನಿಮ್ಮದೇ ತಂಡ ರಚಿಸಿಕೊಳ್ಳಿ. ಶಿಸ್ತು, ಸಾಹಸ ಮತ್ತು ಕೌಶಲ್ಯಭರಿತ ಈ ಕೆಲಸದಲ್ಲಿ ಎಚ್ಚರ ಅವಶ್ಯ ಎಂದು ವಿದ್ಯರ‍್ಥಿಗಳಿಗೆ ಕಿವಿ ಮಾತನ್ನಾಡಿದರು.

ತರಬೇತಿಯಲ್ಲಿ ಪಾಲ್ಗೊಂಡ ರೋರ‍್ಸ್ ಮತ್ತು ರೇಂರ‍್ಸ್ ವಿದ್ಯರ‍್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು. ತೇಜಸ್ವಿನಿ, ದೀಕ್ಷಾ, ಉಮಾವತಿ, ಅಕ್ಷಯ್ ಮತ್ತು ರೋಶನ್ ಅವರು ೭ ದಿನಗಳ(ಸೆ. ೧೪ರಿಂದ ಸೆ.೨೦) ತರಬೇತಿಯಲ್ಲಿ ಕಲಿತ ವಿಷಯಗಳು ಹಾಗೂ ಇಲ್ಲಿನ ಊಟೋಪಚಾರದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಪದ್ಮಶ್ರೀ ಪುರಸ್ಕೃತ ಕೊಡಗು ಜಿಲ್ಲಾ ಗೈಡ್ಸ್ ಆಯುಕ್ತೆ ರಾಣಿ ಮಾಚಯ್ಯ ಮಾತನಾಡಿ, ಇಲ್ಲಿ ನೀವು ಪಡೆದುಕೊಂಡಿರುವ ಅನುಭವ ಇತರರೊಂದಿಗೆ ಹಂಚಿಕೊಳ್ಳಿ. ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ವೈಯಕ್ತಿಕವಾಗಿ ನೆರವಿಗೆ ಬರಲಿದೆ. ನಿಮ್ಮ ಕೌಶಲ್ಯ ನಿಮಗೆ ಮತ್ತು ಇತರರಿಗೆ ಪ್ರಯೋಜನವಾಗಬೇಕು. ಜೀವನದಲ್ಲಿ ಶಿಸ್ತು ಪಾಲಿಸಿದಾಗ ಮಾತ್ರ ನಿಮ್ಮ ಸಾಧನೆಗೆ ಬೆಲೆ ಬರುತ್ತದೆ ಎಂದರು.
ರಾಜ್ಯ ಸಂಸ್ಥೆಯ ಗೈಡ್ ಆಯುಕ್ತೆ ಲತಾ ಎಂ, ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಬಿ. ಮುಹಮ್ಮದ್ ತುಂಬೆ, ಶ್ರೀನಿವಾಸ ಪೂಜಾರಿ, ಜಯವಂತಿ ಸೋನ್ಸ್, ಪ್ರತೀಮ್, ಹ್ಯಾಮ್(ಎಚ್‌ಎಎಂ ರೇಡಿಯೋ) ನರ‍್ದೇಶಕ ಮಂಜು ಬೆಂಗಳೂರು, ದ.ಕ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಗುರುಪುರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಗಂಜಿಮಠ, ಜಿಲ್ಲಾ ಜಂಟಿ ಕರ‍್ಯರ‍್ಶಿ ಜಯವಂತಿ ಸೋನ್ಸ್ ಉಪಸ್ಥಿತರಿದ್ದರು. ಎಎಸ್‌ಒಸಿ ಭರತ್‌ರಾಜ್ ಸ್ವಾಗತಿಸಿ ಕರ‍್ಯಕ್ರಮ ನಿರೂಪಿಸಿದರು. ಜಿಲ್ಲಾ ಕರ‍್ಯರ‍್ಶಿ ಪ್ರತಿಮ್ ಕುಮಾರ್ ವಂದಿಸಿದರು.
