ಪೊಳಲಿ: ಮಂಗಳೂರಿನಲ್ಲಿ ಆ 22ರಂದು ನಡೆದ ಜಿಲ್ಲಾಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಿ ಸರಕಾರಿ ಶಾಲೆಯ ಕೀರ್ತೀಯನ್ನು ಹೆಚ್ಚಿಸಿದ್ದಾರೆ.

ಮುಖ್ಯ ಶಿಕ್ಷಕರಾದ ಸುಬ್ರಾಯ ಪೈ,ಹಾಗೂ ದೈಹಿಕ ಶಿಕ್ಷಕರಾದ ಜಯಂತ್‌ ಅವರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು


ಸಂದೀಪ್-500ಮೀ – ಪ್ರಥಮ1000ಮೀ- ಪ್ರಥಮ ಜತಿನ್ ಅಯ್ಯಪ್ಪ -3000ಮೀ- ಪ್ರಥಮ 500ಮೀ – ದ್ವಿತೀಯ;, ಗೀತೇಶ್-1000ಮೀ- ದ್ವಿತೀಯ ,ಚೇತನ್-2000ಮೀ- ಪ್ರಥಮ ,ಅನನ್ಯ -3000 ಮೀ- ಪ್ರಥಮ, ವಿಶ್ವಾಸ್ -3000ಮೀ- ದ್ವಿತೀಯ ,ರಕ್ಷಾ -1000ಮೀ- ತೃತೀಯ , ಸಾತ್ವಿಕ -500ಮೀ – ತೃತೀಯ , ಹಂಸಿಕ -3000ಮೀ- ದ್ವಿತೀಯ ,ಶ್ಯಾಸರೆಡ್ಡಿ -2000ಮೀ – ತೃತೀಯ ,ಸ್ಥಾನವನ್ನು ಪಡೆದು ಜಿಲ್ಲೆಗೆ ತಾಲೂಕಿಗೆ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಶಾಲಾ ಶಿಕ್ಷಕರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಸಂದೀಪ, ಜತಿನ್ ಅಯ್ಯಪ್ಪ, ಗೀತೇಶ್, ಚೇತನ್, ಅನನ್ಯ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಎಸ್ ಡಿಎಂಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಮತ್ತು ಎಲ್ಲಾ ಶಿಕ್ಷಕರು ಅಭಿನಂದಿಸಿದ್ಸದಾರೆ.

By suddi9

Leave a Reply

Your email address will not be published. Required fields are marked *