ಬಂಟ್ವಾಳ: ಕಲ್ಲಡ್ಕ ಮೆಲ್ಸೇತುವೆಯ ತಳಭಾಗದಲ್ಲಿ ಗೂಡ್ಸ್ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಕೋರಿ ಶಾಸಕರು ಹಾಗೂ ಸಂಸದರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ಬಂಟ್ವಾಳ ತಾಲೂಕು ಗೂಡ್ಸ್ ಸಣ್ಣ ಮತ್ತು ದೊಡ್ಡ ಪಿಕಪ್, 407, ಟೆಂಪೋ ರಿಕ್ಷಾ ಚಾಲಕ ಮಾಲಕರ ಸಂಘ ನಿರ್ಧರಿಸಿದೆ.


ಬಿ.ಸಿ.ರೋಡ್‌ನ ರಿಕ್ಷಾ ಭವನದಲ್ಲಿ ನಡೆದ ಸಂಘದ 25 ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತಲ್ಲದೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಸಂಘದ ಸದಸ್ಯರು ಶ್ರಮಪಟ್ಟು ನಿರ್ಮಿಸಿರುವ ಟೆಂಪೋ ನಿಲ್ದಾಣದಲ್ಲಿ ಅಕ್ರಮವಾಗಿ ಗೂಡಂಗಡಿಗಳು ಟೆಂಟ್ ಹಾಕಿರವ ಬಗ್ಗೆಯು  ಸಭೆಯಲ್ಲಿ ಚರ್ಚೆನಡೆಸಲಾಯಿತು.


ಸಂಘದ ಅಧ್ಯಕ್ಷ,ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರು ಕಾನೂನನ್ನು ಪಾಲಿಸಿ ತಮ್ಮ ಕೆಲಸ ನಿರ್ವಹಿಸಬೇಕು,  ಸಂಘವನ್ನು ಟ್ರೇಡ್ ಯೂನಿಯನ್ ಆಗಿ ನೋಂದಾಯಿಸಿ, ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಲಭ್ಯವಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರುʼ


ಸಂಘದ ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ ಅವರು ಮಾತನಾಡಿ, ಸದಸ್ಯರು ಮಹಾಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕೋರಿದರು. ಉಪಾಧ್ಯಕ್ಷ ನಾರಾಯಣ ಹೊಸ್ಮಾರು, ಕಾರ್ಯದರ್ಶಿ ರಾಬರ್ಟ್ ಮೆಲ್ಕಾರ್, ಜೊತೆ  ಕೋಶಾಧಿಕಾರಿ ಲತೀಫ್ ವೇದಿಕೆಯಲ್ಲಿದ್ದರು.


ಇದಕ್ಕು ಮೊದಲು ವಿಧಿವಶರಾದ ಸದಸ್ಯರಿಗೆ  ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇದೇ ವೇಳೆ 2025ನೇ ಸಾಲಿನ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಾಬರ್ಟ್ ಮೆಲ್ಕಾರ್ ಸ್ವಾಗತಿಸಿದರು. ನಾರಾಯಣ ಹೊಸ್ಮಾರು ವಂದಿಸಿದರು. 

By suddi9

Leave a Reply

Your email address will not be published. Required fields are marked *