ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವಗ್ಗ ಪ್ರಸಕ್ತ ಸಾಲಿನಲ್ಲಿ ಒಟ್ಟು 349.18 ಕೋಟಿ ರೂ.ವ್ಯವಹಾರ ನಡೆಸಿ1.63 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ಪ್ರಮೋದ್ಕುಮಾರ್ ರೈ ಅವರು ಹೇಳಿದ್ದಾರೆ.

ಸೋಮವಾರ ಸಂಘದ ನೂತನ ಸಭಾಂಗಣದಲ್ಲಿ2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ , ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಟನ್ನು ಘೋಷಿಸಿದರು.ರೈತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವು 2.15 ಕೋ.ರೂ.ಪಾಲು ಬಂಡವಾಳ,61.18 ಕೋ.ರೂ. ಠೇವಣಿಯನ್ನು ಹೊಂದಿದ್ದು,58.35 ಕೋ.ರೂ. ಸದಸ್ಯರ ಸಾಲ ಹೊರಬಾಕಿ ಇದ್ದು, ಬ್ಯಾಂಕ್ ಮತ್ತು ಇತರೆ ಸಹಕಾರಿ ಸಂಸ್ಥೆಯಲ್ಲಿ 27.03 ಕೋ.ರೂ.ಹೂಡಿಕೆ ಮಾಡಲಾಗಿದ್ದು, ದುಡಿಯುವ ಬಂಡವಾಳ 93.51 ಕೋ.ರೂ.ಇರುತ್ತದೆ ಎಂದು ವಿವರಿಸಿದರು.
ಸಂಘದ ನೂತನ ಕಟ್ಟಡ ‘ಸಮೃದ್ಧಿ ಸಹಕಾರ ಸೌಧ’ ಕಳೆದ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದು, ಇದು ನಮ್ಮ ಸಂಘದ ಸಮೃದ್ಧಿಯ ಸಂಕೇತವಾಗಿರುತ್ತದೆ ಎಂದರು.ಇದೇ ವೇಳೆ ಶೇ.85 ಕ್ಕು ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಠೇವಣಿದಾರರಿಗೆ ಶೇ.5 ರಷ್ಟು ಹೆಚ್ಚುವರಿ ಬಡ್ಡಿ, ರಿಯಾಯಿತಿ ದರದಲ್ಲಿ ಸಭಾಭವನ ಬಾಡಿಗೆಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಪಿ. ಅಮ್ಮು ರೈ ನಿರ್ದೇಶಕರಾದ ಪಿ. ಜಿನರಾಜ ಅರಿಗ,ಕೆ. ಚಂದಪ್ಪ ಪೂಜಾರಿ, ಬೆನೆಡಿಕ್ಟ ಡಿಸೋಜ,ಶಿವಪ್ರಸಾದ್ ಬಿ., ಸವಿತ ಬಿ ಎಸ್, ಅಶಾ, ಪ್ರಕಾಶ್ ಶೆಟ್ಟಿ,ನವೀನ್ ಶೆಟ್ಟಿ, ಚಂದಪ್ಪ ಮೂಲ್ಯ,ಬಾಲಕಷ್ಣ ನಾಯ್ಕ, ರಾಜು,ವೃತ್ತಿಪರ ನಿರ್ದೇಶಕರ ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪಿ.ಸ್ವಾಗತಿಸಿ,ವರದಿ ವಾಚಿಸಿದರು.
