ಬಂಟ್ವಾಳ: ಓಂ ಫ್ರೆಂಡ್ಸ್( ರಿ ) ಕಳ್ಳಿಗೆ ಪಚ್ಚಿನಡ್ಕ ಇದರ ಆಶ್ರಯದಲ್ಲಿ 26ನೇ ವರ್ಷದ ಮೊಸರುಕುಡಿಕೆ ಉತ್ಸವವು  ಸಂಘದ ಶ್ರೀ ಕೃಷ್ಣವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು.


ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ತಂಡದಿಂದ ಚಾಲನೆಗೊಂಡ ಕಾರ್ಯಕ್ರಮವು ವಿವಿಧ ಆಟೋಟ ಸ್ಪರ್ಧೆ, ಅಡಿಕೆ ಮರ ಆರೋಹಣ, ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಜರಗಿತು.


ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಸಂಘದ ಹಿರಿಯ ಮಾರ್ಗದರ್ಶಕ ನಾರಾಯಣ ಆಚಾರ್ಯ ಕಳ್ಳಿಗೆ, ಹಿರಿಯ ಸದಸ್ಯ ರಘುನಾಥ್ ಪೂಜಾರಿ, ಬಾಲಗೋಕುಲ ಅಧ್ಯಕ್ಷೆ ಮಾಲಾ ಗಣೇಶ್ ಉಪಸ್ಥಿತರಿದ್ದರು.


ಸಂಚಾಲಕರಾದ ಜಯರಾಜ್, ರವಿಕಲ್ಪನೆ, ದಿನೇಶ್, ಗಾಯತ್ರಿ, ಮಾಲಾ,ಕವಿತ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಶ್ರೀ ಕೃಷ್ಣದೇವರ ಭವ್ಯ ಶೋಭಯಾತ್ರೆ ನಡೆಯಿತು ಗೊಂಬೆ ಕುಣಿತ, ನಾಸಿಕ್ ಬ್ಯಾಂಡ್ ಮತ್ತಿತರ ವಿನೋದಾವಳಿಗಳು ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು. 

By suddi9

Leave a Reply

Your email address will not be published. Required fields are marked *