ಬಂಟ್ವಾಳ:ಸರಕಾರಿ ಶಾಲೆಗಳಲ್ಲಿ ಕೆಲವೊಂದು ಮೂಲಭೂತ ಸೌಲಭ್ಯಗಳ ಕೊರತೆ ನಡುವೆಯೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ಧಕಟ್ಟೆ ಹೇಳಿದ್ದಾರೆ.

ಇಲ್ಲಿನ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಉಚಿತ ಧ್ವನಿವರ್ಧಕ ಕೊಡುಗೆಯನ್ನು ಶುಕ್ರವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಝೂಬಿ ಧ್ವಜಾರೋಹಣ ನೆರವೇರಿಸಿದರು. ಹೊಸಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಸದಾಶಿವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ತುಳು ಸಾಹಿತಿ ಉಗ್ಗಪ್ಪ ಪೂಜಾರಿ, ಧರ್ಮಗುರು ಹುಸೇನ್ ಸಖಾಫಿ ಶುಭ ಹಾರೈಸಿದರು.
ರೋಟರಿ ಕ್ಲಬ್ಬಿನ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂತೋಷ್ ಪೂಜಾರಿ ಕರ್ಪೆ, ಗ್ರಾ.ಪಂ.ಸದಸ್ಯೆ ರುಕಿಯಾ ಇಬ್ರಾಹಿಂ, ಮಾಜಿ ಸದಸ್ಯ ಯೋಗೀಶ ಶೆಟ್ಟಿ ಪುಚ್ಚಮೊಗರು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಅಮಿತಾ, ಪ್ರಗತಿಪರ ಕೃಷಿಕ ಶ್ಯಾಂ ಭಟ್ ಪುಚ್ಚಮೊಗರು, ಪ್ರಮುಖರಾದ ಮೊಯ್ದಿನ್ ಝೂರಿ, ಹನೀಫ್ ಪುಚ್ಚಮೊಗರು, ಎಸ್.ಎಂ.ಇಬ್ರಾಹಿಂ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ವಸಂತ ಕುಮಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಕುಮಾರ್ ವಂದಿಸಿದರು. ಶಿಕ್ಷಕಿ ಪ್ರತಿಮಾ ಕೆ.ವಿ.ಕಾರ್ಯಕ್ರಮ ನಿರೂಪಿಸಿದರು.
