ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ಮನೆ ಹಸ್ತಾಂತರ
ಬಂಟ್ವಾಳ: ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಕಳ್ಳಿಗೆ ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀ ವಿವೇಕಾಚ್ಯೆತನ್ಯನಂದ ಸ್ವಾಮೀಜಿಯವರ ಆಶೀರ್ವಾದದಿಂದ ಶ್ರೀರಾಮ ನಗರ ಬೆಂಜನಪದವಿನಲ್ಲಿ ಪುನರ್ನಿಮಾಣಗೊಂಡ ಮನೆಯನ್ನು ದೇವಕಿ ಚಂದ್ರಹಾಸ ಕುಟುಂಬಕ್ಕೆ ಭಾರತ ಮಾತೆಯ ಭಾವಚಿತ್ರವನ್ನು ನೀಡುವ ಮೂಲಕ ಸ್ವಾಮೀಜಿಯವರು ಅ.17ರಂದು ಭಾನುವಾರ ಹಸ್ತಾಂತರಿಸಿದರು.


ಈ ಸಂಧರ್ಭದಲ್ಲಿ ಆಶೀರ್ವಾಚನ ನೀಡಿದ ಸ್ವಾಮೀಜಿ ಇಂತಹ ದೀನ ದುಃಖಿತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಎಲ್ಲರೂ ಕ್ಯೆ ಜೋಡಿಸುವ ಮೂಲಕ ಅಂತವರ ಬದುಕಿನಲ್ಲೂ ಬೆಳಕು ಕಾಣುವಂತಾಗಲಿ ಇಂತಹ ಸಮಾಜಮುಖಿ ಚಟುವಟಿಕೆಗಳಲಿ ಸದಾ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧ್ಯರ್ಯ ತುಂಬಿದರು.

ಮನೆ ಪುನರ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಶಾಲು ಹಾಕಿ ಆಶೀರ್ವಾದಿಸಿದರು. ಪೂಜ್ಯರಾದ ಶ್ರೀ ಗಣೇಶ ಭಟ್ಟ್ ಸುಜೀರು ವ್ಯೆದಿಕ ವಿಧಿವಿದಾನದೊಂದಿಗೆ ಗಣಹೋಮ ನಡೆಸಿಕೊಟ್ಟರು.
ದಾನಿಗಳಾಗಿ ಸಹಕರಿಸಿದ ಶ್ರೀಮತಿ ಪ್ರೀಯದರ್ಶಿನಿ ಸುನಿಲ್ ಧರಿಬಾಗಿಲು, ಬಬಿತಾ ಅಶ್ವಿನ್ ಕರ್ಕೇರ ಮುಂಡಾಜೆ, ಶೇಖರ ಬೆಳ್ಚಾಡ ಮುಂಡಾಜೆ, ರಮಾನಂದ ಶೆಟ್ಟಿ ಬೆಂಜನಪದವು, ಕಳ್ಳಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಗ್ರಾಮ ವಿಕಾಸ ತಾಲೂಕು ಸಂಯೋಜಕ ಮನೋಹರ ಕಂಜತ್ತೂರು, ಗ್ರಾಮ ವಿಕಾಸ ನೆತ್ತರಕೆರೆ ಸಂಯೋಜಕ ಸಂತೋಷ ಕುಮಾರ್ ನೆತ್ತರಕೆರೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರೇಷ್ಮಾ, ಅಂಗನವಾಡಿ ಶಿಕ್ಷಕರಾದ ಶ್ರೀಮತಿ ರೇಖಾ ಉಪಸ್ಥಿತರಿದ್ದರು.
ಈ ಸೇವಾ ಕಾರ್ಯದಲ್ಲಿ ಸಹಕರಿಸಿದ ಶ್ರೀದುರ್ಗಾ ಯುವಕ ಮಂಡಲ, ಶ್ರೀನಿಧಿ ಮಾತೃಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರ್ವಹಿಸಿದರು.



