ಬಂಟ್ವಾಳ :ನವನೀತ ಬಾಲಗೋಕುಲ ನೆತ್ತರಕೆರೆ ಇದರ ಅಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಗೋಕುಲಾಷ್ಟಮಿ ಕಾರ್ಯಕ್ರಮವು ನೆತ್ತರಕೆರೆಯಲ್ಲಿ ನಡೆಯಿತು.ನವನೀತ ಬಾಲಗೋಕುಲದ ವಿದ್ಯಾರ್ಥಿಗಳು ಮುದ್ದು ಕೃಷ್ಣ, ರಾಧೆಯರಾಗಿ ತುಂಟಾಟವಾಡುತ್ತಾ ಕಂಗೊಳಿಸಿದ್ದರು.ಮಕ್ಕಳಿಗೆ ಆಟೋಟ ಸ್ಪರ್ಧೆ,ಛದ್ಮವೇಷ ಮುಂತಾದ ವಿವಿಧ ಸ್ಪರ್ಧೆ ಹಾಗೂ ನೃತ್ಯ,ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಬಾಲಗೋಕುಲ ಪ್ರಮುಖ್ ವಸಂತ ಕಾಟಿಪಳ್ಳ ಬೌದ್ದಿಕ್ ನೀಡಿದರು.ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅಶೋಕ ಹ್ಯೊಗೆಗದ್ದೆ ವಿಜೇತರಿಗೆ ಬಹುಮಾನ ವಿತರಿಸಿದರು.
ಬಾಲಗೋಕುಲ ಸಮಿತಿ ಅಧ್ಯಕ್ಷ ಮೋಹನ್ ಕುಲಾಲ ಸಂಚಾಲಕ ಮೋಹನ್ಆಚಾರಿ, ಕೋಶಾಧಿಕಾರಿ ಸುಧಾಕರ್ ಕುಲಾಲ್, ಗ್ರಾಮವಿಕಾಸ ಪ್ರತಿಷ್ಟಾನದ ಸಂತೋಷ್ ಕುಮಾರ್ ನೆತ್ತರಕೆರೆ, ಮಾತಾಜಿಗಳಾದ ಲಿಖಿತ, ಗೌತಮಿ, ವರ್ಷ, ಶ್ರಾವ್ಯ, ನಿವೇದಿತಾ, ಸಿಂಧು, ಜನನಿ ಅಶ್ವಿನಿ ಉಪಸ್ಥಿತರಿದ್ದರು.
ಮನ್ವಿತ್ ಸ್ವಾಗತಿಸಿದರು. ಸಾಕ್ಷಿ ವಂದಿಸಿದರು. ಮಿತಂಶ್ ಹಾಗೂ ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.
