ಮೂಡುಬಿದರೆ: ವರ್ತಮಾನದ ಬದುಕಿನಲ್ಲಿ ವಿಜ್ಞಾನವೇ ಅಂತಿಮ ಸತ್ಯ ಎನ್ನುವ ಮನೋಭಾವನೆ ಸರಿಯಲ್ಲ. ವಿಜ್ಞಾನದೊಂದಿಗೆ ಭಾರತೀಯ ಸನಾತನ ಚಿಂತನೆಗಳು ಸುಜ್ಞಾನವನ್ನು ಅರಳಿಸುತ್ತದೆ. ಸನಾತನ ಚಿಂತನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೃದಯ ತಜ್ಞ ಡಾ. ಬಿ.ಎಂ. ಹೆಗ್ಡೆ ತಿಳಿಸಿದರು.
mbd_dec11_11(a)
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಅರಿವು ಅರಳಿಸುವ ಅಭಿಯಾನ `ತಿಂಗಳ ಚಿಂತನ’ಕಾರ್ಯಕ್ರಮದಲ್ಲಿ `ಸನಾತನ ಧರ್ಮ ಮತ್ತು ಜೀವನ ಶೈಲಿಯ ಕುರಿತು ಗುರುವಾರ ಸಂಜೆ ಮಾತನಾಡಿದರು. ಮಕ್ಕಳಲ್ಲಿ ಯೋಚನೆ ಮಾಡುವ ಶಕ್ತಿಗೆ ಇಂದು ಅವಕಾಶ ನೀಡದೆ ಇರುವುದು ನಾವು ಮಾಡುವ ದೊಡ್ಡ ತಪ್ಪು. ನಮ್ಮನ್ನು ಇನ್ನೊಬ್ಬರ ಜತೆ ಹೋಲಿಕೆ ಮಾಡುವುದು ಸರಿಯಲ್ಲ. ಅಹಂಕಾರ, ಸ್ವಾರ್ಥ ಮೀರಿ ಇನ್ನೊಬ್ಬರಿಗಾಗಿ ಬದುಕಬೇಕು. ಪರೋಪಕರ ಸನಾತನ ಧರ್ಮದಲ್ಲಿರುವ ಶ್ರೇಷ್ಠ ಅಂಶ ಎಂದರು.
ಮನುಷ್ಯ ಬದಲಾವಣೆಗಳಿಗೆ ಹೆದರಬಾರದು. ಸಾರ್ಥಕ ಜೀವನಕ್ಕೆ ಬದಲಾವಣೆಯನ್ನು ಸ್ವೀಕರಿಸಬೇಕೆಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *