ಕೈಕಂಬ: ಅಡ್ಡರು ಬರ್ಕೆ ದೈವ ದೇವರ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ ಅಡ್ಡೂರು ಬರ್ಕೆ ಗುತ್ತು ಮನೆಯಲ್ಲಿ ಆಟಿಡೊಂಜಿ ದಿನ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಆಗಸ್ಟ್ 3 ರಂದು ಭಾನುವಾರ ನಡೆಯಿತು.ಬರ್ಕೆ ಕುಟುಂಬದ ಹಿರಿಯರಾದ ಉಮೇಶ್ ಪೂಜಾರಿ ಮತ್ತು ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಧ್ಯಾಹ್ನದವರೆಗೆ ಕ್ರೀಡಾಕೂಟ ನಡೆಯಿತು.

ಕುಟುಂಬದ ಹಾಗೂ ಆಸುಪಾಸಿನ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಶ್ರೀ ಶಿವಪ್ರಸಾದ್ ಶಾಂತಿ ಸರಪಾಡಿ ಇವರು ವಿದ್ಯಾಥಿಗಳಿಗೆ ಪುಸ್ತಕಗಳನ್ನು ನೀಡಿದರು.

ಆಟಿ ವಿಶೇಷತೆಯ ತಿಂಡಿ ತಿನಿಸುಗಳ ಬಗ್ಗೆ ಅಭಿರುಚಿ ಇರಬೇಕು ಕುಟುಂಬದ ಪ್ರತಿಯೊಬ್ಬರು ಸದಸ್ಯರು ಒಗಟ್ಟಿನಲ್ಲಿ ಇದ್ದರೆ ವರ್ಷಕ್ಕೊಮ್ಮೆ ದೈವದ ಪರ್ವಕ್ಕೆ ಸೀಮಿತವಾಗದೇ ಇಂತಹ ಕಾರ್ಯಕ್ರಮವನ್ನು ಕುಟುಂಬದ ಮನೆಯಲ್ಲಿ ಮಾಡಲು ಸಾಧ್ಯ , ಬರ್ಕೆ ಮನೆಯ ಕುಟುಂಬಸ್ಥರು ಆಟಿದ ದಿನದ ಕಾರ್ಯಕ್ರಮವನ್ನು ಆಯೋಜಿಸಿ ಇತರ ಕುಟುಂಬಸ್ಥರಿಗೆ ಮಾಧರಿಯಾಗಿದ್ದಾರೆ ಎಂದು ಶಿವಪ್ರಸಾದ್ ಶಾಂತಿ ಸರಪಾಡಿ ಹೇಳಿದರು.

ಕಾರ್ಯಕ್ರಮದಲ್ಲಿ ಗುರುಪುರ ಜುಮಾದಿ ದೈವದ ಪಾತ್ರಿಯಾದ ತನಿಯಪ್ಪ ಪೂಜಾರಿ, ಸುಭಾಷ್ಚಂದ್ರ ಪೊನ್ನೆಲ, ಟ್ರಸ್ಟ್ ನ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಟ್ರಸ್ಟ್ ನ ಕಾರ್ಯದರ್ಶಿ ರಮೇಶ್ ಬಟ್ಟಾಜೆ , ದೈವಪರಿಚಾರಕರಾದ ಆನಂದ ಪೂಜಾರಿ, ಗೋಪಲ ಪೂಜಾರಿ,ಸಿತಾರಾಮ ಪೂಜಾರಿ ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು ಮಹಿಳಾ ಸಮಿತಿಯ ಅಧ್ಯಕ್ಷರು ಮತ್ತು ಮಹಿಳಾ ಸಂಘಟನಾ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿ, ಸರ್ವ ಸದಸ್ಯರು ,ಕುಟುಂಬಸ್ಥರು ಊರಿನ ಗ್ರಾಮಸ್ಥರು ಸೇರಿದ್ದರು .ಟ್ರಸ್ಟ್ ನ ಕಾರ್ಯದರ್ಶಿ ರಮೇಶ್ ಬಟ್ಟಾಜೆ ನಿರೂಪಣೆ ಮಾಡಿ ನಿರೀಕ್ಷಾ. ಸ್ವಾಗತಿಸಿದರು

