ಬಂಟ್ವಾಳ:ಯುವ ಪ್ರತಿಭೆ ಕು. ರೆಮೊನಾ ಪೆರೇರಾ ಅವರು 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಹಿನ್ನಲೆಯಲ್ಲಿ ಬ್ರಹ್ಮಕುಮಾರೀಸ್ ಮಂಗಳೂರು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಬ್ರಹ್ಮಕುಮಾರೀಸ್ ಹುಬ್ಬಳ್ಳಿ ವಲಯದ ಹಿರಿಯ ಸಹೋದರಿ ರಾಜಯೋಗಿನಿ ಬ್ರಹ್ಮ ಕುಮಾರಿ ನಿರ್ಮಲಕ್ಕ ಅವರು ಕು.ರೆಮೊನಾ ಅವರನ್ನು ಸನ್ಮಾನಿಸಿ ಮಾತನಾಡಿ, ರೆಮೊನಾಳ ನೃತ್ಯ ಕೇವಲ ಕಲೆ ಅಲ್ಲ, ಅದು ಆತ್ಮದೊಳಗಿನ ಶುದ್ಧತೆ ಮತ್ತು ಪರಮಾತ್ಮದೊಂದಿಗೆ ಸಂಪರ್ಕ ಸಾಧಿಸುವ ಪ್ರೇರಕ ಪ್ರಾರ್ಥನೆ. ಅವರ ಸಾಧನೆ ಸಮಯದ ಮಿತಿಯನ್ನು ಮೀರಿ ನಡೆದ ಮನಸ್ಸಿನ ಉನ್ನತ ಪ್ರದರ್ಶನವಾಗಿದೆ ಎಂದರು.
ಮಂಗಳೂರು ಶಾಖೆಯ ಸಂಚಾಲಕರಾದ ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಆಪ್ತ ಸಮಾಲೋಚಕಿ ರೇವತಿ ಅಕ್ಕ, ನೃತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಮೊದಲಾದವರಿದ್ದರು.
