.ಬಂಟ್ವಾಳ: ಪೊಳಲಿ ಶ್ರೀರಾಜರಾಜೇಶರವರೀ ಭಜನಾ ಮಂಡಳಿಯ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯ ಸಾನಿಧ್ಯ ದಲ್ಲಿ  ಮೂರುವರ್ಷಕ್ಕೊಮ್ಮೆ ಆಯೋಜಿಸಲಾಗುವ  ಏಳನೇ ವರ್ಷದ ಆಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.


ಆಗಸ್ಟ್ 6 ಸೂರ್ಯೋದಯದವರೆಗೆ ನಡೆಯುವ ಅಖಂಡ ಭಜನಾ ಭಜನಾ ಸಪ್ತಾಹಕ್ಕೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರ ಉಪಸ್ಥಿತಿಯಲ್ಲಿ ಕೋಡಿಮಜಲು ಅನಂತ ಪದ್ಮನಾಭ ಉಪಧ್ಯಾಯ ಅವರು ದೀಪ ಪ್ರಜ್ವಲನಗೈದು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಮೊಕ್ತೇಸರರಾದ ಪವಿತ್ರಪಾಣಿ ಮಾಧವಭಟ್,ಅರ್ಚಕರಾದ ನಾರಾಯಣ ಭಟ್,ರಾಮ್ ಭಟ್,ಪರಮೇಶ್ವರ ಭಟ್,ಪೊಳಲಿ ಶ್ರೀರಾಜರಾಜೇಶರವರೀ ಭಜನಾ ಮಂಡಳಿಯ ಪ್ರಮುಖ ವೆಂಕಟೇಶ್ ನಾವಡ ಹಾಗೂ ವಿವಿಧ ಭಜನಾ ಮಂಡಳಿಯ ಪ್ರಮುಖರು,ಸ್ಥಳೀಯರು ಉಪಸ್ಥಿತರಿದ್ದರು.
ಭಜನಾ ಸಪ್ತಾಹದ ಪ್ರಯುಕ್ತ ಪ್ರತಿದಿನ ತಲಾ ಒಂದು ತಾಸಿನಂತೆ 24 ಭಜನಾ ತಂಡಗಳು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಳ್ಳಲಿದೆ. 

By suddi9

Leave a Reply

Your email address will not be published. Required fields are marked *