ಬಂಟ್ವಾಳ: ಬಂಟರ ಸಂಘ ಫರಂಗಿಪೇಟೆ ವಲಯದ  ನೂತನ ಅಧ್ಯಕ್ಷರು ಹಾಗೂ ಪದಾದಿಕಾರಿಗಳ ಪದಗ್ರಹಣ  ಮತ್ತು ಆಟಿದ ಗಮ್ಮತ್ ಕಾರ್ಯಕ್ರಮವು ತುಂಬೆ ವಳವೂರಿನ ಬಂಟವಾಳದ ಬಂಟರ ಭವನದಲ್ಲಿ ನಡೆಯಿತು.
ಮಾಜಿ ಸಚಿವ ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಬಂಟ ಸಮುದಾಯ ಇತರ  ಸಮುದಾಯದವರನ್ನು ಗೌರವಿಸುವ  ಸಮಾಜ,ಅದಕ್ಕಾಗಿಯೇ ನಮ್ಮನ್ನು ಇತರ  ಸಮಾಜದವರು ಕೂಡ  ನಾಯಕತ್ವವನ್ನು ನೀಡುತ್ತಾರೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಬರೋಡ ಶಶಿ ಕ್ಯಾಟರರರ್ಸ್ ಎಂಡಿ  ಶಶಿಧರ ಶೆಟ್ಟಿ ಬರೋಡ ಅವರು ಮಾತನಾಡಿ,ಬಂಟ ಸಮುದಾಯ ಸಾಹಸಿ ಪ್ರವೃತ್ತಿ ಯವರಾಗಿದ್ದು, ಎಲ್ಲಾ ರಂಗಗಳಲ್ಲಿಯೂ ತನ್ನ ವಿಶೇಷ ಛಾಪು ಮೂಡಿಸಿದ್ದಾರೆ  ಎಂದರು.
ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಕೊಟ್ಟಿಂಜಗುತ್ತು ಸಭಾಧ್ಯಕ್ಷತೆ ವಹಿಸಿದ್ದರು.ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಿಟ್ಟೆಗುತ್ತು  ರವಿರಾಜ್ ಶೆಟ್ಟಿ ,ಬಂಟ್ವಾಳ  ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾದ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ,ನೂತನ  ಪ್ರದಾನ ಕಾರ್ಯದರ್ಶಿ  ಸದಾನಂದ ಆಳ್ವ ಕಂಪ ,ನೂತನ ಉಪಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರು ಗುತ್ತು ಮೊದಲಾದವರು ವೇದಿಕೆಯಲ್ಲಿದ್ದರು.


ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯೆ ವಿಜಯ ಶೆಟ್ಟಿಸಾಲೆತ್ತೂರು, ಸಂಘದ ನಿಕಟಪೂರ್ವ ಅಧ್ಯಕ್ಷದೇವದಾಸ್ ಶೆಟ್ಟಿ, ಕೊಡ್ಮಾಣ್,ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಎನ್. ಆಳ್ವ ,ಯುವವಿಭಾಗದ ಅಧ್ಯಕ್ಷ ನಿಶಾಂತ್ ಕಾವ ಅವರು‌ ಆಟಿ ತಿಂಗಳ ಬಗ್ಗೆ ಮಾಹಿತಿ‌ ನೀಡಿದರು.


ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು,ಸಾಧಕರಿಗೆ ಸನ್ಮಾನ,ವೈವಾಹಿಕ ಜೀವನದ 50 ವರ್ಷ ಪೂರೈಸಿದ ದಂಪತಿಗಳಿಗೆ ಅಭಿನಂದಿಸಲಾಯಿತು.ಬಂಟರ ಸಂಘ ಫರಂಗಿಪೇಟೆ ವಲಯದ ಗೌರವಾಧ್ಯಕ್ಷರಾದ ಸುಂದರ ಶೆಟ್ಟಿ ಕಲ್ಲತಡಮೆ , ಅಧ್ಯಕ್ಷರಾದ  ದೇವದಾಸ್ ಶೆಟ್ಟಿ ಕೊಡ್ಮನ್ , ಕಾರ್ಯದರ್ಶಿ ಗಿರೀಶ್ ಶೆಟ್ಟಿ ಕುಂಪನಮಜಲು ,ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರು ಗುತ್ತು ,   ಕಾರ್ಯದರ್ಶಿ ಹರಿಶ್ಚಂದ್ರ ಆಳ್ವ , ಕೋಶಾದಿಕಾರಿ  ಜಿ.ಕೃಷ್ಣ ಶೆಟ್ಟಿ ದೆಮುಂಡೆ , ಜತೆ ಕಾರ್ಯದರ್ಶಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು , ಸಂಘಟನಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಪದಗ್ರಹಣ ಸ್ವೀಕರಿಸಿದರು.


ಮಹಿಳಾ ವಿಭಾಗದ ಅಧ್ಯಕ್ಷೆ ದೀಕ್ಷಾ ಎನ್ ಆಳ್ವ , ಕಾರ್ಯದರ್ಶಿ ಪವಿತಾ ರೈ , ಉಪಸ್ಥಿತರಿದ್ದರು. ನೂತನ ಗೌರವಾಧ್ಯಕ್ಷರಾದ ನವೀನ್ ಶೆಟ್ಟಿ ಮುಂಡಾಜೆ ಗುತ್ತು ಪ್ರಸ್ತಾವಿಸಿ, ಸ್ವಾಗತಿಸಿದರು. ಹರಿಶ್ಚಂದ್ರ ಆಳ್ವ  ವಂದಿಸಿದರು  , ಸುಮಾ ಎನ್ ಶೆಟ್ಟಿ ಮುಂಡಾಜೆಗುತ್ತು ಕಾರ್ಯಕ್ರಮ ನಿರೂಪಿಸಿದರು .ನಾಗರತ್ನ ರೈ ಸಹಕರಿಸಿದರು.ಇದಕ್ಕು ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.ಮಹಿಳೆಯರು ತಮ್ಮ ಮನೆಯಲ್ಲಿ ತಾರಿಸಿ ತಂದಿದ್ದ ವಿವಿಧ ಬಗೆಯ ತಿಂಡಿ ತಿನಸು,ಖಾದ್ಯಗಳನ್ನು ಸವಿದರು.

By suddi9

Leave a Reply

Your email address will not be published. Required fields are marked *