ಕಾವಳಮುಡೂರು ಗ್ರಾ.ಪಂ.ನಲ್ಲಿ ಮಣ್ಣು ಅರೋಗ್ಯ ಕಾರ್ಯಕ್ರಮ
ಬಂಟ್ವಾಳ:ಪ್ರಸಕ್ತ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆ ಅಡಿಯಲ್ಲಿ ಮಣ್ಣು ಅರೋಗ್ಯ ಕಾರ್ಯಕ್ರಮ ಕಾವಳಮುಡೂರು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳಮೂಡೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಅಜಿತ್ ಶೆಟ್ಟಿ ಅವರು ವಹಿಸಿದ್ದರು.

ಈ ಸಂದರ್ಭಬಂಟ್ವಾಳ ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಂದನ್ ಶೆಣೈ ಅವರು ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳಾದ ಕೃಷಿ ಯಾಂತ್ರೀಕರಣ, ಕೃಷಿ ಭಾಗ್ಯ ಯೋಜನೆ, ಬೆಳೆ ವಿಮೆ, ಪಿಎಂಕಿಸಾನ್, ಬೆಳೆ ಸಮೀಕ್ಷೆ ಹಾಗು ಇನ್ನಿತರ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ದೀಕ್ಷಾ ಪಿ.ಸಿ.ಅವರು ಮಣ್ಣು ಅರೋಗ್ಯ, ಮಣ್ಣು ಪರೀಕ್ಷೆಯ ಮಹತ್ವ, ಮಣ್ಣು ಮಾದರಿ ಸಂಗ್ರಹಣೆಯ ವಿಧಾನ, ಬಳಸುವ ಉಪಕರಣಗಳು ಹಾಗು ಮಣ್ಣು ಮಾದರಿ ಸಂಗ್ರಹಣೆ ವೇಳೆ ಗಮನ ಹರಿಸಬೇಕಾದ ಸಂಗತಿಗಳು ಹಾಗೂರೈತರ ಬೆಳೆ ಸಮೀಕ್ಷೆ ಚಿಠಿಠಿ ಬಳಕೆಯ ಕುರಿತು ರೈತರಿಗೆ ತರಬೇತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.ಗ್ರಾಮ ಆಡಳಿತ ಅಧಿಕಾರಿ ರಚನ್ ರೈ ಸ್ವಾಗತಿಸಿದರು.ಇದೇ ವೇಳೆ ಫಲಾನುಭವಿಗಳಿಗೆ ಮಣ್ಣು ಅರೋಗ್ಯ ಚೀಟಿ ವಿತರಿಸಲಾಯಿತು



