ಪೊಳಲಿ:ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಹಿಂದಿನಿAದಲು ಜಗತಿನಾಧ್ಯಂತ ಆಚರಣೆಯನ್ನು ಮಠ ಆಶ್ರಮಗಳಲ್ಲಿ ಆಚರಿಸುತ್ತ ಬಂದಿರುತ್ತಾರೆ. ಹಿಂದುಗಳಿಗಲ್ಲದೆ ಬೇರೆ ಸಾಂಪ್ರದಾಯದವರಿಗೂ ವೀಶೇಷ ಗುರುಪೂರ್ಣಿಮೆದಿನವಾಗಿರುತ್ತದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿಯವರು ಹೇಳಿದರು.

ಅವರು ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಗುರುವಾರ ಗುರುಪೂರ್ಣಿಮೆ ಆಚರಣೆಯ ಸಂದರ್ಭದಲ್ಲಿ ಆಶ್ರಮದ ವಿದ್ಯಾರ್ಥಿಗಳನ್ನು ಹಾಗೂ ಆಶ್ರಮದ ಭಕ್ತಾಧಿಗಳಿಗೆ ಹೋಮದಲ್ಲಿ ಅರ್ಗ್ಯ ಸಮರ್ಪಣೆ ಮಾಡಿಸಿ ಗುರುದೇವ ರಾಮಕೃಷ್ಣ ಪರಮಹಂಸರ ಮಹತ್ವವನ್ನು ತಿಳಿಸಿದರು.

ನಂತರ ಮಾತನಾಡಿದ ಅವರು ಸರಿಯಾದ ಗುರುಗಳನ್ನು ಪಡೆದರೆ ಭವರೋಗದಿಂದ ಮುಕ್ತಿಯನ್ನು ಪಡೆದು ನಮ್ಮ ಜೀವನದ ಗುರಿಯನ್ನು ಪಡೆಯಲು ಸಾಧ್ಯ. ಗುರುಇಲ್ಲದಿದ್ದರೆ ಏನ್ನನು ಸಾದಿಸಲಸಾಧ್ಯ ಜಗತಿನಾದ್ಯಂತ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಹಾರೈಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಆಶೀರ್ವಾದ ಪಡೆದರು.ಈ ಭಾಗದ ಹಲವು ಸಂಘ ಸಂಸ್ಥೆಯ ಸದಸ್ಯರು ಸ್ವಾಮೀಜಿಗಳ ಆಶೀರ್ವಾದಪಡೆದು ಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *