ಬಂಟ್ವಾಳ: ನಗರ ಯೋಜನಾ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿಯಾಗಿ ಗಾಯತ್ರಿ ಡೊಂಬರ್ ಅವರು ಸೋಮವಾರ ಅಧಿಕಾರ ಸ್ವೀರಕರಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸಿಬಂಧಿವರ್ಗ ಉಪಸ್ಥಿತರಿದ್ದು, ನೂತನ ಸಹಾಯಕ ಕಾರ್ಯದರ್ಶಿಯವರನ್ನು ಸ್ವಾಗತಿಸಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿಯಾಗಿದ್ದ ಅಭಿಷೇಕ್ ಅವರು ವರ್ಗಾವಣೆಗೊಂಡ ಬಳಿಕ ಹಲವು ಸಮಯದಿಂದ ಖಾಲಿಯಾಗಿದ್ದ ಈ ಹುದ್ದೆಗೆ ಇದೀಗ ನೂತನ ಸಹಾಯಕ ಕಾರ್ಯದರ್ಶಿ ನಿಯುಕ್ತಿಗೊಂಡಿದ್ದಾರೆ.
