ಬಂಟ್ವಾಳ: ಅಖಿಲ ಭಾರತ ಮಟ್ಟದ ಜೆ.ಎಂ. ಎಂ ಪರೀಕ್ಷೆಯಲ್ಲಿ 34ನೆ ರಾಂಕ್ ಗಳಿಸಿ ಡೆಲ್ಲಿ ಐ.ಐ.ಟಿ ಯಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ಬಾಲಕ ಬಡ ಕುಟುಂಬದ ಪುಟ್ಟ ಹಾಗೂ ವಿನುತಾ ದಂಪತಿಯ ಪುತ್ರ ಪೂಜಿತ್ ಕುಲಾಲ್ ರವರನ್ನು ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ವತಿಯಿಂದ ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ರಾದ ಸೋಮಯ್ಯ ಹನೈನಡೆ ನೇತೃತ್ವದಲ್ಲಿ ಸನ್ಮಾನಿಸಿ ಸಹಾಯ ಧನ ವಿತರಿಸಲಾಯಿತು.ಬಳಿಕ ಮಾತನಾಡಿದ ಅವರು ಪ್ರತಿಭಾವಂತ ಬಾಲಕನನ್ನು ಗುರುತಿಸಿ ಸನ್ಮಾನಿಸುವುದು ನಮ್ಮಸಂಘಕ್ಕೆ ಹೆಮ್ಮೆ ಹಾಗೂ ಆತನಿಗೆ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸೋಮಪ್ಪ ಬಂಗೇರ, ಶ್ರೀನಿವಾಸ ಕುಲಾಲ್, ರೋಹಿಣಿ, ಶೀನ ಟೈಲರ್ ಅಲ್ಲಿಪ್ಪಾದೆ, ಕಿಟ್ಟು ಮೂಲ್ಯ,ನೀಲಪ್ಪ ಸಾಲಿಯಾನ್, ರತ್ನಾವತಿ, ವಿಠ್ಠಲ ಮೂಲ್ಯ, ದಿನಕರ ಎಂ.,ರಾಮ ಮರ್ದೋಳಿ, ಶಾಂಭವಿ ಹಾಗೂ ಸದಸ್ಯರಾದ ಭಾಸ್ಕರ್ ಕೊಲ್ನಾಡು ಗುಣವತಿ, ಬಾಲಕನ ತಾಯಿ ವಿನುತಾ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಸರಾದ ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.
