ಸಾಮಾಜಿಕ ಕನಸಿನಿಂದ ವೈಯಕ್ತಿ ಬೆಳವಣಿಗೆ: ಡಾ.ಮೋಹನ್ ಆಳ್ವ
ಮೂಡುಬಿದರೆ: ನಮ್ಮ ಬದುಕಿನಲ್ಲಿ ವ್ಯಯಕ್ತಿಕವಾದ ಮತ್ತು ಸಾಮಾಜಿಕವಾದ ಕನಸುಗಳನ್ನು ಹೊಂದಿರಬೇಕು. ಸಾಮಾಜಿಕವಾದ ಕನಸ್ಸುಗಳನ್ನು ನನಸು ಮಾಡಿದಾಗ ಸಮಾಜಕ್ಕೆ ಮತ್ತು ವೈಯಕ್ತಿಕವಾಗಿಯೂ ಬೆಳವಣಿಗೆ ಸಾಧ್ಯ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದರು.
ಮೂಡುಬಿದರೆ ಸಮಾಜಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದ ಜೆಸಿಐ ಮೂಡುಬಿದರೆ ತ್ರಿಭುವನ್ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ವ್ಯಕ್ತಿ ಮತ್ತು ವ್ಯಕ್ತಿತ್ವದ ವ್ಯತ್ಯಾಸ ಅರಿತುಕೊಳ್ಳಬೇಕು. ನಮ್ಮ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು.

mbd_dec9_7 (5)

ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಜೀವನ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದರು.
ಇಂದು ಎಲ್ಲ ಕ್ಷೇತ್ರಗಳು ವ್ಯಾಪಾರೀಕರಣಗೊಳ್ಳುತ್ತಿರುವುದರಿಂದ ಅವುಗಳ ಮೂಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ.ಇದರಿಂದಾಗಿ ದೇಸಿಯ ಚಿಂತನೆಗಳು ಮಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ತಮ್ಮ ಜವಾಬ್ದಾರಿ ಅರಿತುಕೊಂಡು ಮುನ್ನಡೆಯಬೇಕು ಎಂದರು.
ಜೆಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧಿರೇಂದ್ರ ಜೈನ್ ಹಾಗೂ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. 15 ಹೊಸ ಸದಸ್ಯರು ಜೇಸಿಐಗೆ ಸೇರ್ಪಡೆಗೊಂಡರು. ಜೇಸಿ ಸಂಚಿಯನ್ನು ಬಿಡುಗಡೆಗೊಳಿಸಲಾಯಿತು.
ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಜೇಸಿ ವಲಾಯಾಧ್ಯಕ್ಷ ಕೃಷ್ಣ ಮೋಹನ್ ಪಿ.ಎಸ್. ಮಾತನಾಡಿ ಜೇಸಿಯಲ್ಲಿ ಸಿಗುವ ತರಬೇತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಕೊಂಡು ಉನ್ನತಿ ಸಾಧಿಸಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ವಲಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಶುಭಹಾರೈಸಿದರು. ನಿಕಟಪೂರ್ವ ವಲಯಾಧ್ಯಕ್ಷ ಅಶೀತ್ ಕುಮಾರ್.ಕೆ., ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ನಿಕಟಪೂರ್ವ ಕಾರ್ಯದಶರ್ಿ ನಿತ್ಯಾನಂದ ಮೊಗೇರಾಯ, ನೂತನ ಕಾರ್ಯದಶರ್ಿ ಸುದೀಪ್ ಬುನ್ನನ್, ಜೇಸಿರೇಟ್ ಅಧ್ಯಕ್ಷ ಕಸ್ತೂರಿ ಬಲ್ಲಾಳ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಧೀರಜ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *