ಬಂಟ್ವಾಳ: ತುಳುನಾಡ ಮಣ್ಣಿಗೆ ತನ್ನದೇ ಆಧ ಕಲೆ, ಸಂಸ್ಕೃತಿ ಇದ್ದು, ಅದನ್ನು ಗೌರವಿಸಿ, ಉಳಿಸುವ ಕೆಲಸ ಆಗಬೇಕಾಗಿದೆಎಂದುಶ್ರೀ ಕ್ಷೇತ್ರ  ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


ಸಜೀಪಮಾಗಣೆಯ ನಗ್ರಿಗುತ್ತುವಿನಲ್ಲಿಮೂರು ವರ್ಷಗಳಿಗೊಮ್ಮೆ ನಡೆಯುವ  ಜುಮಾದಿ ಬಂಟ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನಗೈದರು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರು ಧರ್ಮಸಭೆಯನ್ನು ಉದ್ಘಾಟಿಸಿ ತುಳುನಾಡಿನ ಕಟ್ಟು ಕಟ್ಟಾಳೆಯ ಪ್ರಕಾರ ಕುಟುಂಬದ ದೈವ, ದೇವರನ್ನು ಆರಾಧಿಸಿಕೊಂಡು ಬಂದರೆ ಆ ಕುಟುಂಬ ಏಳಿಗೆ ಆಗುತ್ತದೆ ಎಂದರು.  ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿಗುತ್ತು,ಮುಂಬೈ ಉದ್ಯಮಿ ಸಂತೋಷ್ ಕುಮಾರ್ ಜಿ ಶೆಟ್ಟಿ, ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಪಣೋಲಿ ಬೈಲು ಕ್ಷೇತ್ರದ ಆಡಳಿತ ಅಧಿಕಾರಿ ದಿವಾಕರ, ಸಜೀಪಗುತ್ತು ಗಡಿಪ್ರದಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ ಬಿಜಂದಾರುಗುತ್ತು ಶಿವರಾಮ ಭಂಡಾರಿ, ಮಾಡದಾರುಗುತ್ತು ಗಡಿಪ್ರದಾನರಾದ ಶಶಿಧರ ರೈ ಯಾನೆ ನಾರಣ ಆಳ್ವ. ರೋಹಿತ್ ಶೆಟ್ಟಿ ನಗ್ರಿಗುತ್ತು,ದೇವಿ ಪ್ರಸಾದ್ ಪೂಂಜಾ,ದಾಮೋದರ ಬಿ.,ನಗ್ರಿಗುತ್ತು ವಿವೇಕ್ ಶೆಟ್ಟಿ ಎಂ.ಕೃಷ್ಣಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *