ಬಂಟ್ವಾಳ:ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ   ಶನಿವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ರಿಚರ್ಡ್ ಕೋಸ್ತಾ ಎಂ ರವರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.


244 ಮತದಾರರ ಪೈಕಿ 222 ಮತಗಳು ಚಲಾವಣೆಯಾಗಿದ್ದು ರಿಚರ್ಡ್ ಕೋಸ್ತಾ ಎಂ ರವರು 123 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಕೆ. ವಿ. ಭಟ್ ಮತ್ತು ಎಂ. ವಿ. ಭಟ್ ರವರು ಉಪಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು, ಹಿರಿಯ ವಕೀಲರಾದ ಎಂ. ಈಶ್ವರ ಉಪಾಧ್ಯಾಯ  ಮೇಲುಸ್ತುವಾರಿ ವಹಿಸಿದ್ದರು.
ಉಳಿದಂತೆ ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರದಾನ ಕಾರ್ಯದರ್ಶಿಯಾಗಿ ಕೆ. ನರೇಂದ್ರನಾಥ ಭಂಢಾರಿ, ಜತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ ರವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By suddi9

Leave a Reply

Your email address will not be published. Required fields are marked *