ಮೂಡಬಿದರೆ: ದನದ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಎರಡು ದನಗಳ ಮೇಲೆ ದಾಳಿ ಮಾಡಿ ಒಂದು ದನವನ್ನು ಕೊಂದು ಹಾಕಿರುವ ಘಟನೆ ಪಾಲಡ್ಕ ಗ್ರಾಮದ ಕೇಮಾರು ಸಮೀಪದ ಕಡ್ತಿಮಾರ್ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
mbd_dec9_6
ಕಡ್ತಿಮಾರ್ ನಿವಾಸಿ ಸುದಾಕರ್ ಪೂಜಾರಿ ಎಂಬವರಿಗೆ ಸೇರಿದ ದನದ ಕೊಟ್ಟಿಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದು, ಕೊಟ್ಟಿಗೆಯಲ್ಲಿ ಮೂರು ದನಗಳಿದ್ದವು. ತಡರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಮೂರು ದನಗಳ ಪೈಕಿ ಎರಡು ದನಗಳ ಮೇಲೆ ದಾಳಿ ನಡೆಸಿದ್ದು, ಒಂದು ದನವನ್ನು ಅರ್ಧ ತಿಂದು ಕೊಂದು ಹಾಕಿದೆ. ಇನ್ನೊಂದು ದನಕ್ಕೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಜೀವಹಾನಿಯಾಗಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆಯ ಪ್ರಯತ್ನವನ್ನೂ ಮೀರಿಸುವ ಮಟ್ಟಿಗೆ ಕಡಂದಲೆ ಆಸುಪಾಸಿನಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಜನ ಭಯಭೀತರಾಗಿದ್ದಾರೆ.

By suddi9

Leave a Reply

Your email address will not be published. Required fields are marked *