ಬಂಟ್ವಾಳ: ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ
ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ‌ 17 ಮಂದಿ‌ ಅಭ್ಯರ್ಥಿಗಳು ಜಯಭೇರಿ‌ ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತರು ಈ ಬಾರಿಯು ಮುಖಭಂಗ ಅನುಭವಿಸುದ್ದಾರೆ
ಸಾಮಾನ್ಯ ಕ್ಷೇತ್ರದಿಂದ ಅರುಣ್ ,ಅರುಣ್ ಕುಮಾರ್ ಕೆ.,ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ, ಭೋಜ ಸಾಲಿಯಾನ್,ರಮೇಶ್ ಸಾಲಿಯಾನ್ ,ಸತೀಶ್, ರಮೇಶ್ ಸಾಲಿಯಾನ್ , ಸುರೇಶ್ ಕುಲಾಲ್ , ಸುರೇಶ್ ಕುಲಾಲ್ ಎನ್ ,ಹರೀಶ್ , ಮಹಿಳಾ ಕ್ಷೇತ್ರದಿಂದ ಮಾಲತಿ ಮಚ್ಚೇಂದ್ರ, ವಿದ್ಯಾ, ಹಿಂ. ವರ್ಗ ‘ಎ’ ಕ್ಷೇತ್ರದಿಂದ ಜನಾರ್ದನ ಬೊಂಡಾಲ, ಹಿಂ.ವರ್ಗ ‘ಬಿ’ಕ್ಷೇತ್ರದಿಂದ ಜಗನ್ನಿವಾಸ ಗೌಡ,ಪ. ಜಾ.ಕ್ಷೇತ್ರದಿಂದ ಗಣೇಶ್ ಸಮಗಾರ,
ಪ. ಪಂ.ರೇಖಾ ನಾಯ್ಕ್ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಬ್ಯಾಂಕಿನ ಹಾಲಿ‌ ಅಧ್ಯಕ್ಷ ಸುರೇಶ್ ಕುಲಾಲ್ ಬಂಟ್ವಾಳ ಇವರ ನೇತೃತ್ವದಲ್ಲಿ ಚುನಾವಣೆಯನ್ನು‌ ಎದುರಿಸಲಾಗಿದ್ದು, ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠ ಅಭ್ಯರ್ಥಿಗಳು ವಿಪಕ್ಷ ಕಾಂಗ್ರೆಸ್ ಬೆಂಬಲಿತರ ಅಪಪ್ರಚಾರ,ಸುಳ್ಳು ಆರೋಪದ ನಡುವೆಯು ಮೂರನೇ ಅವಧಿಗೂ ಆಡಳಿತವನ್ನು ಉಳಿಸಿಕೊಳ್ಳುವಳ್ಳಿ ಯಶಸ್ವಿಯಾಗಿದೆ.

ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಚುನಾವಣೆ ನಡೆಯಿತು.
ಪುತ್ತೂರು ತಾಲೂಕು ಸಹಕಾರಿ ಅಧಿಕಾರಿ‌ರಘ ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಸಿಒ ಬೋಜ‌ ಮೂಲ್ಯ ಹಾಗೂ ಸಿಬ್ಬಂದಿಗಳು‌ ಸಹಕರಿಸಿದ್ದರು.ವಿಜೇತ ಅಭ್ಯರ್ಥಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ‌,ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮೊದಲಾದವರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *